ಅಲಬೂರು ಗ್ರಾಮದಲ್ಲಿ 31 ಕೊರೋನಾ ಪಾಸಿಟಿವ್ ಪ್ರಕರಣ,

ಕೊಟ್ಟೂರು ಮೇ 01 : ತಾಲೂಕಿನ ಕೋಗಳಿ ಹೋಬಳಿಯ ಅಲಬೂರು ಗ್ರಾಮದಲ್ಲಿ ಈ ಮೊದಲು 11 ಪಾಸಿಟಿವ್ ಪ್ರಕರಣಗಳು ಸಕ್ರಿಯವಾಗಿದ್ದು, 20 ಪ್ರಕರಣಗಳು ಬಂದಿರುತ್ತವೆ. ಒಂದೇ ಏರಿಯಾದಲ್ಲಿ 5 ಕ್ಕಿಂತ ಹೆಚ್ಚಿಗೆ ಪ್ರಕರಣಗಳು ಪತ್ತೆಯಾದಲ್ಲಿ ಮಾತ್ರ ಕಂಟೋನ್ ಮೆಂಟ್ ಝೋನ್ ಮಾಡಲು ಅವಕಾಶ ಇದ್ದು, ಅಲಬೂರಿನ ಮಸೀದಿ ಏರಿಯಾದಲ್ಲಿ 7 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದರಿ ಏರಿಯಾವನ್ನು ಕಂಟೋನ್ ಮೆಂಟ್ ಝೋನ್ ಘೋಷಿಸಿ ಸಾರ್ವಜನಿಕರ ಓಡಾಟವನ್ನು ನಿಷೇಧಿಸಿದೆ. ಕಂದಾಯ ನಿರೀಕ್ಷಕರಾದ ಡಿ ಶಿವಕುಮಾರ್ ಹಾಗೂ ಪಿಡಿಒ, ಗ್ರಾಮ ಲೆಕ್ಕಿಗರಾದ ಸುಧಾ ಜೈನರ್, ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿ ಇದ್ದರು.