ಅಲಬೂರಲ್ಲೊಬ್ಬ ಮಾದರಿ ರೈತ, ಸಾವಯವ ಕೃಷಿಯಲ್ಲಿ ಖುಷಿ ಕಂಡಕೊಟ್ರೇಶ

ಕೊಟ್ಟೂರು ಅ 24:ತಾಲೂಕಿನ ಅಲಬೂರು ಗ್ರಾಮದ ರೈತ ಡಿ.ಕೊಟ್ರೇಶಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ.
ಯುವ ಉತ್ಸಾಹಿ ಕ್ರಿಯಾ ಶೀಲತೆಯಿಂದ ತೋಟದ ನಿರ್ವಹಣೆಯಲ್ಲಿ ತೊಡಗಿರುತ್ತಾರೆ.ಕಾಲು ಎಕರೆ ಜಮೀನಿನಲ್ಲಿ 800 ಎಲೆ ಬಳ್ಳಿ
ಸಸಿಗಳನ್ನು ನೆಟ್ಟಿದ್ದಾರೆ. ರಾಸಾಯನಿಕ ಔಷಧಿಬಳಸ ದೇಸಾವಯವ ಕೃಷಿ ಪದ್ಧತಿ ಅನುಸರಿಸಿ ಯಶಸ್ಸು ಕಾಣುತ್ತಿರುವುದಾಗಿ ಹೇಳುತ್ತಾರೆ. ಈ ಭಾಗದಲ್ಲಿ ‘ಸಾವಯವ ಸರ್ದಾರ’ ಎನಿಸಿಕೊಂಡಿದ್ದಾರೆ.
ಸ್ವಲ್ಪಭೂಮಿಯಲ್ಲಿ ಮಾಸಿಕ ಎಲೆತೋಟಕ್ಕೆ ಅಂದಾಜು 6 ಸಾವಿರರೂ ಖರ್ಚು ಮಾಡಿ 24ಸಾವಿರ ರೂಗಳು ಆದಾಯ ಬರುತ್ತದೆ ಎಂದು ಮಾದರಿಯುವ ರೈತಡಿ. ಕೊಟ್ರೇಶ ಹೇಳಿದರು.