ಅರ್ಹ ಮತದಾರರು ಕೈ ತಪ್ಪದಂತೆ ಜಾಗೃತಿ ವಹಿಸಿ- ರಜನಿಕಾಂತ ಚವ್ಹಾಣ

ಸಿರವಾರ.ಜ೨೨- ಮತದಾರರ ಪಟ್ಟಿಯಿಂದ ಕೈ ಬಿಟ್ಟ ಮತದಾರರನು ಮತಗಟ್ಟೆ ಮಟ್ಟದ ಅಧಿಕಾರಿಗಳು ಮತ್ತೊಮ್ಮೆ ಪುನರ್ ಸ್ಥಳ ಪರಿಶೀಲನೆ ಮಾಡಿ ಅರ್ಹ ಮತದಾರನ್ನು ಒಂದು ವೇಳೆ ಕೈ ಬಿಟ್ಟರೆ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸಹಾಯಕ ಅಯುಕ್ತರಾದ ರಜನಿಕಾಂತ ಚವ್ಹಾಣ ಅದಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
೫೫ ಮಾನವಿ ವಿಧಾನಸಭಾಕ್ಷೇತ್ರಕ್ಕೆ ಸಂಬಧಿಸಿದಂತೆ ಅವರು ಮಾನವಿ ಕ್ಷೇತ್ರದ ನೂಡಲ್ ಅಧಿಕಾರಿಗಳಾದ ಮಹ್ಮದ್ ಜಿಲಾನಿ ಸಹಾಯಕ ಆಯುಕ್ತರು ಸಿರವಾರ ಮತ್ತು ಮಾನವಿ ತಾಲೂಕಿನ ೩೧.೦೦೦ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಕುರಿತು ಎರಡೂ ತಾಲೂಕಿನ ತಹಸೀಲ್ದಾರ, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಸೂಪರ್ ವೈಸರಗಳು ಸಭೆ ಕರೆದು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಮತದಾರರನ್ನು ಮತ್ತೋಮ್ಮೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಪುನರ್ ಸ್ಥಳ ಪರಿಶೀಲನೆ ಮಾಡಿ ಯಾವೂದೇ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಕ್ರಮವಹಿಸಲು ತಿಳಿಸಿದರು. ಒಂದು ವೇಳೆ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಲ್ಲಿ ನಮೋನೆ-೬ ರಡಿ ಹೊಸ ಅರ್ಜಿ ಭರ್ತಿ ಮಾಡಿ ಸೇರ್ಪಡೆ ಮಾಡಲು ಸೂಚಿಸಿದರು.