ಅರ್ಹ ಪಲಾನುಭವಿಗಳಿಗೆ ಸಾಲ ವಿತರಣೆ

ಆನೇಕಲ್. ಮಾ. ೧೬ – ಆನೇಕಲ್ ಶಿಭಿರ ಕಚೇರಿ ಆವರಣದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಆನೇಕಲ್ ಶಾಖೆಯ ವ್ಯಾಪ್ತಿಗೆ ಒಳಪಡುವ ವ್ಯವಸಾಯ ಸೇವಾ ಸಹಕಾರ ಸಂಘಗಳ ಮುಖಾಂತರ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣರವರು ಅರ್ಹ ಪಲಾನುಭವಿಗಳಿಗೆ ಚೆಕ್ ಗಳನ್ನು ವಿತರಣೆ ಮಾಡಿದರು,
ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಜಿ. ಆಂಜಿನಪ್ಪ, ವಣಕನಹಳ್ಳಿ ಸೋಮಶೇಖರ್ ರೆಡ್ಡಿ, ಹಾರಗದ್ದೆ ಕೆ.ಎನ್.ನಟರಾಜ್, ವಿಎಸ್.ಎಸ್.ಎನ್ ಹಾರಗದ್ದೆ ಬ್ಯಾಂಕ್ ಅಧ್ಯಕ್ಷ ರವಿಚಂದ್ರ, ವಿಎಸ್.ಎಸ್.ಎನ್. ಆನೇಕಲ್ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸಿಇಒ ವೆಂಕಟಮಾರೇಗೌಡ, ಚಿಕ್ಕಹೊಸಹಳ್ಳಿ ಬ್ಯಾಂಕ್ ಅಧ್ಯಕ್ಷ ಜಿ.ವೆಂಕಟೇಶ್, ಬಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಕಾರ್ತಿಕ್, ಮೇಲ್ವಿಚಾರಕಾದ ರಮೇಶ್ ಬಾಗವಹಿಸಿದ್ದರು.