ಅರ್ಹ ಕೂಲಿ ಕಾರ್ಮಿಕರಿಗೆ ಉದ್ಯೋಗ- ಮೇಟಿ


ಬಾದಾಮಿ,ಎ.7: ಗ್ರಾಮೀಣ ಜನರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ನೀಡುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ ಇದರ ಅರಿವು ಮೂಡಿಸುವುದು ಮತ್ತು ಅನುμÁ್ಟನಗೊಳಿಸಲು, ಅರ್ಹ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸಲು ಜಿಲ್ಲೆಯಾದ್ಯಂತ ಬಾದಾಮಿ ನಗರದ ಚಾಣಕ್ಯ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯನ್ನು ಆಯ್ಕೆ ಮಾಡಿ ಆದೇಶ ನೀಡಲಾಗಿದೆ ಎಂದು ಜಿ.ಪಂ.ಅಧ್ಯಕ್ಷೆ ಶ್ರೀಮತಿ ಬಾಯಕ್ಕ(ಗಂಗೂಬಾಯಿ) ಮೇಟಿ ಹೇಳಿದರು.
ಅವರು ಮಂಗಳವಾರ ನಗರದ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂಸ್ಥೆಯು ಗ್ರಾಮೀಣ ಭಾಗಗಳಲ್ಲಿ 100 ದಿನಗಳ ಮಾನವ ದಿನಗಳ ಉದ್ಯೋಗದಿಂದ ವಂಚಿತರಾದ ಕೂಲಿಕಾರ್ಮಿಕರಿಗೆ ಉದ್ಯೋಗ ಒದಗಿಸಲು ಸಹಾಯ ಮಾಡುತ್ತದೆ. ಗ್ರಾಮ ಪಂಚಾಯತ ಸದಸ್ಯರಿಗೆ ಯೋಜನೆಯ ಅನುμÁ್ಟನ ಮತ್ತು ಮಾಹಿತಿ ನೀಡಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶದ ಜನರು ಮತ್ತು ಕೂಲಿ ಕಾರ್ಮಿಕರು ಬೇರೆ ನಗರಗಳಿಗೆ ವಲಸೆ ಹೋಗಬಾರದು ಮತ್ತು ಕೋವಿಡ್19 ರಲ್ಲಿ ಆರೋಗ್ಯದ ದೃಷ್ಟಿಯಿಂದ ಆರ್ಥಿಕವಾಗಿ ಸದೃಢತೆಗೆ ಹೊಂದಿ ನಮ್ಮ ಗ್ರಾಮವನ್ನು ನಾವೇ ಅಭಿವೃದ್ಧಿಪಡಿಸಿಕೊಳ್ಳಬಹುದಾಗಿದೆ. ಮೂಲಭೂತ ಸೌಕರ್ಯಗಳನ್ನು ಮತ್ತು ರೈತರ ಹೊಲಗಳಲ್ಲಿ ಬದು ನಿರ್ಮಾಣ, ಸಸಿಗಳನ್ನು ನೆಡುವುದು, ಕುರಿ ಶೆಡ್, ದನದ ಕೊಟ್ಟಿಗೆ, ಇಂಗು ಗುಂಡಿ, ಕೆರೆ ಅಭಿವೃದ್ಧಿ, ರಸ್ತೆ ಹೀಗೆ ಹಲವಾರು ಯೋಜನೆಗಳನ್ನು ಕ್ರಿಯಾ ಯೋಜನೆ ಮಾಡಿ ಅನುμÁ್ಟನಗೊಳಿಸಲು ಸಹಾಯ ಮಾಡುತ್ತದೆ. ಗ್ರಾಮೀಣ ಭಾಗದ ಜನರು ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು ಎಂದರು. ಈ ಯೋಜನೆಯಡಿ ಮೊದಲು ಸರಕಾರಿ ನೌಕರರು, ಬೇರೆ ನಗರದಲ್ಲಿರುವವರು ಹೆಸರು ಇರುತ್ತಿದ್ದವು. ಇದನ್ನು ತಡೆದು ಅರ್ಹ ಫಲಾನುಭವಿಗಳಿಗೆ ಉದ್ಯೋಗ ದೊರಕುವಂತೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಹಾಂತೇಶ ಹಟ್ಟಿ, ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಯರಗೊಪ್ಪ, ಎಂ.ಡಿ.ಯಲಿಗಾರ, ಕಾಮೇಶ ಜಾಲಿಹಾಳ, ಚಂದ್ರ ಬಿಲ್ಲಾರ, ಹನಮಂತ ಜೋಗಿನ, ಶೋಭಾ ಹಂಡೆನ್ನವರ ಹಾಜರಿದ್ದರು.