ಯೆರೆವಾನ್ (ಅರ್ಮೆನಿಯಾ), ಸೆ.೨೬- ಕಳೆದ ವಾರ ವಿವಾದಿತ ನಾಗೋರ್ನೊ-ಕರಬಖ್ ಪ್ರದೇಶವನ್ನು ಅಝರ್‌ಬೈಜಾನ್ ವಶಪಡಿಸಿಕೊಂಡದಂದಿನಿಂದ ಸದ್ಯ ಅಲ್ಲಿನ ಪ್ರಾಂತ್ಯದಲ್ಲಿ ವಲಸಿಗರ ಭಾರೀ ದೊಡ್ಡ ದಂಡು ಇದೀಗ ನೆರೆಯ ಅರ್ಮೆನಿಯಾದತ್ತ ಆಗಲು ಆಗಮಿಸಿದೆ. ಈಗಾಗಲೇ ಸುಮಾರು ೬,೫೦೦೦ ನಾಗರಿಕರು ಪುನರ್ವಸತಿ ಪಡೆಯುವ ಸಲುವಾಗಿ ಅರ್ಮೆನಿಯಾಗೆ ಬಂದಿದ್ದು, ಇದೀಗ ಒಂದು ಲಕ್ಷಕ್ಕೂ ಅಧಿಕ ನಿವಾಸಿಗಳು ಅರ್ಮೆನಿಯಾಗಗೆ ತೆರಳಲು ಸಾಲುಗಟ್ಟಿ ನಿಂತಿದ್ದಾರೆ.
ಕರಬಖ್‌ನಲ್ಲಿರುವ ಭವಿಷ್ಯದಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಈ ಬಗ್ಗೆ ನಾವು ಮನವಿ ಮಾಡುತ್ತೇವೆ. ನಿರಾಶ್ರಿತ ಜನಾಂಗೀಯ ಅರ್ಮೆನಿಯಾ ನಾಗರಿಕರಿಗೆ ನಮ್ಮ ದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅರ್ಮೆನಿಯಾ ಪ್ರಧಾನಿ ಘೋಷಿಸಿದ ಹಿನ್ನೆಲೆಯಲ್ಲಿ ಸದ್ಯ ಕರಬಖ್‌ನಲ್ಲಿರುವ ಹೆಚ್ಚಿನ ನಾಗರಿಕರು ಅರ್ಮೆನಿಯಾದತ್ತ ಬರಲು ಆಗಮಿಸಿದ್ದಾರೆ. ಅರ್ಮೇನಿಯಾ ಮತ್ತು ಅಜೆರ್‌ಬೈಜಾನ್‌ನ ರಾಯಭಾರಿಗಳು ಮಂಗಳವಾರದ ಬಳಿಕ ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಯೂನಿಯನ್ ಬೆಂಬಲಿತ ಮಾತುಕತೆಗಾಗಿ ಭೇಟಿಯಾಗಲಿದ್ದಾರೆ. ನಾಗೋರ್ನೊ-ಕರಾಬಖ್ ಅನ್ನು ವಶಪಡಿಸಿಕೊಂಡ ನಂತರ ಇದು ಮೊದಲ ಮಾತುಕತೆಯಾಗಿದೆ. ಯುಎಸ್ ಸ್ಟೇಟ್ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಎರಡೂ ಕಡೆಯವರು ಶಾಶ್ವತ ಶಾಂತಿ ಒಪ್ಪಂದವನ್ನು ತಲುಪಲು ಒತ್ತಾಯಿಸಿದರು. ಸದ್ಯ ಅರ್ಮೆನಿಯಾ ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕಾರ್‌ಗಳಲ್ಲಿ ಆಗಮನವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕರಬಖ್‌ನಲ್ಲಿರುವ ಹೆಚ್ಚಿನ ಎಲ್ಲರೂ ಅರ್ಮೆನಿಯಾಗೆ ಸ್ಥಳಾಂತರವಾಗಲಿದ್ದಾರೆ ಎನ್ನಲಾಗಿದೆ.