ಅರ್ಬಾಜ್,ಸೊಹೈಲ್,ನಿರ್ವಾಣ್ ವಿರುದ್ಧ ಕೇಸು:ಬಾಂದ್ರಾ ಸ್ಟಾರ್ ಹೊಟೇಲ್ ನಲ್ಲಿ ಕ್ವಾರಂಟೈನ್.

ಅರ್ಬಾಜ್ ಖಾನ್, ಸೊಹೈಲ್ ಖಾನ್, ಮತ್ತು ನಿರ್ವಾಣ್ ಖಾನ್ ಈ ಮೂವರೂ ಯುಎಇ ಯಿಂದ ಹಿಂತಿರುಗಿದ ನಂತರ ಕ್ವಾರಂಟೈನ್ ಗೆ ಕೂರದೆ ಹೊರಗಡೆ ತಿರುಗಾಡಿರುವ ಘಟನೆ ಇದೀಗ ವಿವಾದ ಸೃಷ್ಟಿಸಿದ್ದು ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ .
ಈ ಕುರಿತಂತೆ ತಂದೆ ಸಲೀಮ್ ಖಾನ್ ಮತ್ತೊಮ್ಮೆ ಮಕ್ಕಳ ರಕ್ಷಣೆಗೆ ಮುಂದೆ ಬಂದಿದ್ದಾರೆ. “ಈ ಮೂವರು ಹೊಟೇಲ್ ನಲ್ಲಿ ಕ್ವಾರಂಟೈನ್ ಇದ್ದಾರೆ” ಎಂಬ ಹೇಳಿಕೆ ನೀಡಿ ವಿವಾದ ತಣ್ಣಗಾಗಿಸಲು ನೋಡುತ್ತಿದ್ದಾರೆ.


ಈ ಮೂವರು ಡಿಸೆಂಬರ್ ೨೫ರಂದು ಯು ಎ ಇ ಯಿಂದ ಬಂದವರು ನೇರವಾಗಿ ಮನೆಗೆ ಕಾಲಿರಿಸಿ ವಿವಾದ ಕಾಣಿಸಿದ್ದಾರೆ.
ಈ ನಟರ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್
ಗಾಗಿ ಮುಂಬೈಯ ತಾಜ್ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಇವರಿಗೆ ಕ್ವಾರಂಟೈನ್ ಇರಬೇಕಿತ್ತು. ಆದರೆ ಈ ಮೂವರು ಮರುದಿನ ಮುಂಜಾನೆ ಡಿಸೆಂಬರ್ ೨೬ರಂದು ಹೋಟೆಲಿನಿಂದ ಮನೆಗೆ ಬಂದಿದ್ದರು . ಇವರ ವಿರುದ್ಧ ಮಹಾನಗರಪಾಲಿಕೆಯು ದೂರು ದಾಖಲಿಸಿತ್ತು. ಒಂದು ವಾರದ ತನಿಖೆ ನಡೆದು ಈ ಮೂವರ ಹೇಳಿಕೆ ಪಡೆದ ನಂತರ ಪ್ರೋಟೋಕಾಲ್ ಮುರಿದ ಆರೋಪದಲ್ಲಿ ಕೇಸು ದಾಖಲಿಸಲಾಗಿತ್ತು.

ಖಾನ್ ಬ್ರದರ್ಸ್ ಮೇಲೆ ಐಪಿಸಿ ಸೆಕ್ಷನ್ ೧೮೮, ೨೬೯ ಮತ್ತು ಮಹಾಮಾರಿ ಅಧಿನಿಯಮ ಸೆಕ್ಷನ್ ೩ ರ ಅನ್ವಯ ಪ್ರಕರಣ ದಾಖಲಿಸಲಾಗಿದೆ .ಈ ಕೇಸನ್ನು ಮಹಾನಗರಪಾಲಿಕೆಯ ಮೆಡಿಕಲ್ ಆಫೀಸರ್ ದಾಖಲಿಸಿದ್ದಾರೆ.
ಅನಂತರ ಮುಂಬೈ ಪೊಲೀಸರು ಕ್ರಮ ಕೈಗೊಳ್ಳುತ್ತಾ ಮೂವರನ್ನು ಬಾಂದ್ರಾದ ಇವರ ಮನೆ ಸಮೀಪದ ಒಂದು ಸ್ಟಾರ್ ಹೋಟೆಲ್ ನಲ್ಲಿ ಇರಿಸಿದ್ದಾರೆ. ಮಹಾರಾಷ್ಟ್ರ ಸರಕಾರದ ನಿಯಮದಂತೆ ಯುಕೆ, ಯುಎಇ, ಮತ್ತು ಯುರೋಪ್ ದೇಶಗಳಿಂದ ಬಂದವರಿಗೆ ಏಳುದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಅನಿವಾರ್ಯವಾಗಿದೆ.

ಅಮಿತಾಭರ ನೆರೆಮನೆಯವರಾದ ಜಾನ್ಹವಿ ಕಪೂರ್: ಮೂರು ಮಾಳಿಗೆಯ ಮನೆಗೆ ೩೯ ಕೋಟಿ ರೂಪಾಯಿ!

ಬೋನಿಕಪೂರ್ ಮತ್ತು ದಿವಂಗತ ಶ್ರೀದೇವಿ ಯ ಮಗಳು ಜಾನ್ಹವಿ ಕಪೂರ್ ಮುಂಬೈಯಲ್ಲಿ ಹೊಸಮನೆಯನ್ನು ಖರೀದಿಸಿದ್ದಾರೆ.
ಈ ಮನೆಯ ಬೆಲೆ ೩೯ ಕೋಟಿ ರೂಪಾಯಿ. ಮನೆಯು ಜುಹು ವಿಲೇಪಾರ್ಲೆ ಸ್ಕೀಮ್ ಕ್ಷೇತ್ರದಲ್ಲಿದೆ. ಮತ್ತು ಇದು ಮುಂಬೈಯ ಲಕ್ಸುರಿ ಕ್ಷೇತ್ರ ಹೈ-ಫೈ ಶ್ರೀಮಂತರ ಏರಿಯಾ.


ಈ ಮನೆಯನ್ನು ಖರೀದಿಸಿದ ನಂತರ ಜಾನ್ಹವಿ ಕಪೂರ್ ಇದೀಗ ಅಮಿತಾಭ್ ಬಚ್ಚನ್, ಅನಿಲ್ ಕಪೂರ್ ,ಅಜಯ್ ದೇವಗನ್ ಮತ್ತು ಏಕತಾ ಕಪೂರ್ ಅಂತಹ ದಿಗ್ಗಜರ ನೆರೆಮನೆಯವರಾಗಿದ್ದಾರೆ.


ಜಾನ್ಹವಿ ಕಪೂರ್ ಖರೀದಿಸಿದ ಮನೆ ೧೪ನೇ ೧೫ನೇ ಮತ್ತು ೧೬ನೇ ಮಾಳಿಗೆಯಲ್ಲಿದೆ.


೭೮ ಲಕ್ಷ ರೂಪಾಯಿಯಷ್ಟು ಸ್ಟ್ಯಾಂಪ್ ಡ್ಯೂಟಿ ಕಟ್ಟಿದ್ದಾರೆ . ಸದ್ಯಕ್ಕೆ ಲೋಖಂಡ್ ವಾಲಾದಲ್ಲಿ ತಂದೆ ಬೋನಿಕಪೂರ್ ಮತ್ತು ಸಹೋದರಿ ಖುಷಿಯ ಜೊತೆ ಅವರು ವಾಸಿಸುತ್ತಿದ್ದಾರೆ.
ಜಾನ್ಹವಿ ಕಪೂರ್ ೨೦೧೮ರಲ್ಲಿ ಫಿಲ್ಮ್ ’ದಡಕ್’ ಮೂಲಕ ಬಾಲಿವುಡ್ ಗೆ ಎಂಟ್ರಿ ಆಗಿದ್ದಾರೆ.