ಅರ್ಬನ್ ಬ್ಯಾಂಕಿಗೆ ನಿವ್ವಳ ಲಾಭ 3.67 ಲಕ್ಷ

ಭಾಲ್ಕಿ:ಸೆ.25:ಕೊರೊನಾ ಸಂಕಟದಲ್ಲಿ ವ್ಯಾಪಾರಸ್ಥರು ಕಂಗಲಾಗಿದ್ದಾರೆ.ಅವಶ್ಯಕ ಗ್ರಾಹಕರಿಗೆ ಬ್ಯಾಂಕಿನಿಂದ ಸಾಲ ನೀಡಿ ಅವರ ಹಿತ ಕಾಪಾಡಬೇಕು ಎಂದು ಅಧ್ಯಕ್ಷ ವಿಲಾಸ ಬಕ್ಕಾ ಹೇಳಿದರು.
ಶಿವಾಜಿ ಚೌಕ್ ಹತ್ತಿರವಿರುವ ಅರ್ಬನ್ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ 39ನೇ ಬ್ಯಾಂಕ್‍ನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ,ಮಾತನಾಡಿದರು.
ಇತ್ತೀಚಿನ ಮಾಹಿತಿ ಅನುಸಾರ ಬ್ಯಾಂಕ್ ಸುಸ್ತಿದಾರ ಸಾಲಗಾರರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.ಸಾಲಗಾರರಿಗೆ ಮನವರಿಕೆ ಮಾಡಿ ಹಂತ ಹಂತವಾಗಿ ಸಾಲ ವಸೂಲಿ ಮಾಡಿ,ಪುನ: ಸಾಲ ಪಡೆಯುವಂತೆ ಅವರ ಮನ ಪರಿವರ್ತಿಸಬೇಕು ಎಂದು ಹೇಳಿದರು.ಬ್ಯಾಂಕ್ ಸಿಬ್ಬಂದಿಯವರ ಉತ್ತಮ ಕಾರ್ಯಾಚರಣೆಯಿಂದ ಬ್ಯಾಂಕ್ ಲಾಭದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಗ್ರಾಹಕರ ಕಲ್ಯಾಣವೇ ಬ್ಯಾಂಕಿನ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್‍ನ ಉಪಾಧ್ಯಕ್ಷೆ ಸೂರ್ಯಮತಿ ಚಂದ್ರಕಾಂತ ಮಡ್ಡೆ, ನಿರ್ದೇಶಕರಾದ ಜೀವನ ಪೆದ್ದೆ, ಚಂದ್ರಶೇಖರ ವಂಕೆ, ಅನೀಲಕುಮಾರ ಲೋಖಂಡೆ, ದಿಲೀಪಕುಮಾರ ಸುಂಟೆ, ನಿರಂಜನ ಅಷ್ಟೂರೆ, ಜಗನ್ನಾಥ ಬಿರಾದಾರ, ಎಮ್‍ಡಿ ಹುಸೇನ್ ಇನಾಮದಾರ, ರಾಹುಲ ಸಾವಳೆ, ಮನಿಷಾ ವಾಲೆ, ಸಂಜೀವಕುಮಾರ ಗುಂಜರಗೆ, ನಿತೀನ ಸ್ವಾಮಿ, ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.
ಲೆಕ್ಕಾಧಿಕಾರಿ ಪ್ರಶಾಂತ ಖಂಡ್ರೆ ವಾರ್ಷಿಕ ವರದಿ ವಾಚನ ಮಾಡಿದರು.
ಬ್ಯಾಂಕಿನ ವ್ಯವಸ್ಥಾಪಕ ವಿಜಯಕುಮಾರ ಬಿರಾದಾರ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಕ್ಯಾಷಿಯರ್ ಕಾವೇರಿ ಶಿವಪುತ್ರ ಕಾಕನಾಳೆ ವಂದಿಸಿದರು.