ಅರ್ನಾಬ್ ಗೋಸ್ವಾಮಿ ಬಂಧನ -ಕೂಡ್ಲಿಗಿ ಎಬಿವಿಪಿ ಖಂಡನೆ.

ಕೂಡ್ಲಿಗಿ.ನ.7:-ಮಹಾರಾಷ್ಟ್ರ ಪೊಲೀಸರು ರಿಪಬ್ಲಿಕ್ ಟಿವಿ ಮಾಧ್ಯಮದ ಪ್ರದಾನ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವುದನ್ನು ಖಂಡಿಸಿ ಇಂದು ಕೂಡ್ಲಿಗಿ ಎಬಿವಿಪಿ ಕಾರ್ಯಕರ್ತರು ಕೂಡ್ಲಿಗಿ ತಹಶೀಲ್ದಾರ್ ಮುಖೇನಾ ರಾಷ್ಟ್ರಪತಿಗಳಿಗೆ ಶುಕ್ರವಾರ ಮದ್ಯಾಹ್ನ ಮನವಿ ಸಲ್ಲಿಸಿದರು.
ಬುಧವಾರದಂದು ಬೆಳಿಗ್ಗೆ ಮಹಾರಾಷ್ಟ್ರ ಪೊಲೀಸರು ಅರ್ನಾಬ್ ಗೋಸ್ವಾಮಿಯವರ ನಿವಾಸದ ಮೇಲೆ ದಾಳಿ ಮಾಡಿ ಬಂಧಿಸಿದ್ದು ಇದು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಮೌಲಿಕ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದ ಆಗಿದೆ ದುರ್ಭಾವನೆ ಮತ್ತು ಕಾನೂನು ಬಾಹಿರವಾಗಿ ಬಂಧಿಸಿರುವುದು ಇಡೀ ದೇಶದ ಪತ್ರಿಕಾ ಮಾದ್ಯಮಕ್ಕೆ ಆಘಾತವಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ಕೃತ್ಯ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯವನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸುವ ಷಡ್ಯಂತ್ರವಾಗಿದೆ. ಗೋಸ್ವಾಮಿಯವರು ಪಾಲಘಾರನಲ್ಲಿ ಸಾಧುಗಳ ಹತ್ಯೆ ನಡೆದಿರುವ ಬಗ್ಗೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅನೇಕ ಕಾನೂನು ಬಾಹಿರ ಕೃತ್ಯಗಳ ಕುರಿತಾಗಿ ಮಾಧ್ಯಮದ ಮೂಲಕ ಸರ್ಕಾರಕ್ಕೆ ಕನ್ನಡಿಯಂತೆ ತೋರಿಸಿದ್ದಾರೆ ಈ ಎಲ್ಲಾ ಘಟನೆಗಳ ವರದಿ ಮಾಡಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ಅಶೋಭನೀಯವಾಗಿದೆ ಎಂದು ಹೇಳಬಹುದಾಗಿದೆ. 2018ರಲ್ಲಿ ಮಹಾರಾಷ್ಟ್ರ ಪೋಲೀಸರಿಂದ ತನಿಖೆ ನಂತರ ಆತ್ಮಹತ್ಯೆ ಕೇಸ್ ಅಂತ್ಯಕಂಡಿತ್ತು ಆದರೆ ಸೇಡು ತೀರಿಸಿಕೊಳ್ಳುವ ಉದ್ದೇಶಕ್ಕಾಗಿ ಆ ಕೇಸನ್ನು ಸರ್ಕಾರ ಮತ್ತೆ ಓಪನ್ ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಮುಖವಾಡವನ್ನು ಬಯಲುಮಾಡಿಕೊಂಡಿದೆ ಗೋಸ್ವಾಮಿ ಬಂಧನದ ಸಂದರ್ಭದಲ್ಲಿ ಮನೆಯ ಸದಸ್ಯರೊಂದಿಗೆ ಪೊಲೀಸರು ನಡೆದುಕೊಂಡ ಪರಿ ಕರಾಳದಿನವನ್ನು ನೆನಪಿಸುತ್ತಿದೆ ಎಂದು ತಿಳಿಸಿರುವ ಎಬಿವಿಪಿ ಕಾರ್ಯಕರ್ತರು ಅರ್ನಾಬ್ ಗೋಸ್ವಾಮಿಯನ್ನು ತಕ್ಷಣವೇ ಬಂಧನದಿಂದ ಬಿಡುಗಡೆಗೊಳಿಸಬೇಕು ಮತ್ತು ಮಹಾರಾಷ್ಟ್ರ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ನಿಲ್ಲಿಸುವಂತೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಸಿ. ಮಂಜುನಾಥ, ನಗರ ಕಾರ್ಯದರ್ಶಿ ಉಮೇಶ, ಡಿ.ಮಣಿಕಂಠ, ಕೆ.ಹೆಚ್.ಎಂ. ಅಜೇಯ್ ಕುಮಾರ್, ಅಶೋಕ್ ಬಾಬುರಾವ್, ಎನ್. ಹನುಮಂತ, ಜಿ. ಸುರೇಶ, ಪವನ, ಸೊಲ್ಲೆಶ, ಅರುಣ, ಉಮೇಶ, ಎಚ್.ಸುರೇಶ, ಕೆ. ಮಧು, ಗುರುರಾಜ ಹಾಗೂ ಕೂಡ್ಲಿಗಿ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದು ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ್ ಗೆ ಮನವಿ ಸಲ್ಲಿಸಿದರು.