ಅರ್ದಂಬರ್ಧ ಪ್ರೇಮ ಕಹಾನಿ

“ಅರ್ದಂಬದ್ದ ಪ್ರೇಮಕಥೆ ” ಮುಂದಿಟ್ಟುಕೊಂಡು ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರ ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ. ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ವೇಳೆ ಮಾತನಾಡಿದ  ಅರವಿಂದ್ ಕೌಶಿಕ್ ಮಾತನಾಡಿ ಲವ್‍ಸ್ಟೋರಿ ವಿಥೌಟ್ ಲವ್. ನಾಯಕ, ನಾಯಕಿ ಇಬ್ಬರೂ ಒಂದಾಗಬೇಕು ಅನ್ನೋದೇ ನೋಡುಗರ ಆಸೆ, ಒಂದಾಗ್ತಾರಾ, ಇಲ್ವಾ ಪ್ಯಾನ್ ಹೃದಯಗಳ ಕಥೆ ಎಂದರು,

ನಾಯಕ ಅರವಿಂದ್ ಕೆಪಿ ಮಾತನಾಡಿ ಚಿತ್ರದಲ್ಲಿ ನಾವಿಬ್ಬರೂ ಪ್ರೇಮಿಗಳೇ ಅಲ್ಲ, ಹಾಗಾಗಿ ಐ ಲವ್‍ಯು ಹೇಳುವ ಪ್ರಮೇಯವೂ ಬರಲ್ಲ ಎಂದರೆ ನಾಯಕಿ ದಿವ್ಯಾ ಮಾತನಾಡಿ ನಿಜ ಜೀವನದಲ್ಲಿ ಹೇಗಿದ್ದೇನೋ, ಅದಕ್ಕೆ ತದ್ವಿರುದ್ದವಾದ ಪಾತ್ರ ಚಿತ್ರದಲ್ಲಿದೆ. ಲೈಫ್ ಪ್ರಾಬ್ಲಂಗಳನ್ನು ತುಂಬಾ  ಹಚ್ಚಿಕೊಳ್ಳುವ ಹುಡುಗಿ. ಆಕೆ  ನೋಡಲು ಸ್ವಲ್ಪ ಮುಂಗೋಪಿಯಾದರೂ, ಆಕೆಯ ಮನಸು ಹೂವಿನಂಥದು ಎಂದರು

ಕಾರ್ತೀಕ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆ ಸಿನಿಮಾ ನಿರ್ಮಿಸುವ ಯೋಜನೆಯಿದೆ ಎಂದರು. ರಾಪರ್ ಅಲೋಕ್, ಶ್ರೇಯಾಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಅಲ್ಲದೆ ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಸೂರ್ಯ ಛಾಯಾಗ್ರಹಣ,ಅರ್ಜುನ್ ಜನ್ಯ  ಸಂಗೀತವಿದೆ