ಅರ್ಥ ವ್ಯವಸ್ಥೆಯನ್ನು ಕತ್ತು ಹಿಸುಕುವ ಕೆಲಸ

ಹಗರಿಬೊಮ್ಮನಹಳ್ಳಿ .ನ.೦೪ ಡಿಜಿಟಲ್‌ ವಹಿವಾಟು ಪ್ರೋತ್ಸಾಹಿಸುವ ಭರದಲ್ಲಿ ಬ್ಯಾಂಕ್‌ಗಳು ಗ್ರಾಮೀಣ ಅರ್ಥವ್ಯವಸ್ಥೆಯನ್ನೇ ಕತ್ತು ಹಿಸುಕಲು ಹೊರಟಿವೆ. ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಶಿರಾಜ್ ಶೇಕ್ ಹೇಳಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡಿ ಡಿಜಿಟಲ್ ಜ್ಞಾನವಿಲ್ಲದವರು ಬ್ಯಾಂಕಿಂಗ್ ವ್ಯವಹಾರ ಮಾಡಲೇಬಾರದು ಎಂದು ಇದರರ್ಥವೆ.? ಕೋವಿಡ್ ಸಂಕಷ್ಟದ ಕಾಲದಲ್ಲೂ ಇಂತಹ ನಿರ್ಧಾರ ಬೇಕಿತ್ತೆ.? ಅರ್ಥಶಾಸ್ತ್ರದ ಅರ್ಥವೇ ಗೊತ್ತಿರದ ಕೇಂದ್ರ ಹಣಕಾಸು ಸಚಿವರ ಕೊಡುಗೆಯೆ ಇದು?
ಆನ್‌ಲೈನ್ ಬ್ಯಾಂಕಿಂಗ್ ಸೌಕರ್ಯವಿಲ್ಲದ ಹಾಗೂ ಈ ಬಗ್ಗೆ ಗೊತ್ತಿಲ್ಲದ ಲಕ್ಷಾಂತರ ಮಂದಿ ಇದ್ದಾರೆ. ಅವರ ವ್ಯವಹಾರವೇನಿದ್ದರೂ ನೇರವಾಗಿ ಬ್ಯಾಂಕ್‌ ಜೊತೆ. ಹೀಗಿರುವಾಗ ಠೇವಣಿ ಮತ್ತು ವರ್ಗಾವಣೆಗೆ ಮಿತಿ ಹೇರಿ ಶುಲ್ಕ ಪಡೆಯುವುದು ಸುಲಿಗೆಯ ಇನ್ನೊಂದು ರೂಪ.ಜನರ ಜೇಬಿಗೆ ಕತ್ತರಿ ಹಾಕುವ ಬ್ಯಾಂಕ್‌ಗಳ ಈ ನಿರ್ಧಾರಕ್ಕೆ ಕೇಂದ್ರ ಕಡಿವಾಣ ಹಾಕಲಿ.
ನಮ್ಮ ಖಾತೆಗೆ ಹಣ ತುಂಬಿದರೂ ದಂಡ ನಮ್ಮ ಖಾತೆಯಿಂದ ಹಣ ತೆಗೆದರೂ ದಂಡ ,ಕೇಂದ್ರದಲ್ಲಿ ಸರ್ಕಾರವಿರೋದೇ ಶುದ್ಧ ದಂಡ!!
” ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಬ್ಯಾಂಕ್ ಲ್ಲಿಟ್ಟ ಹಣಕ್ಕೆ ಅಧಿಕ ಬಡ್ಡಿ ಕೊಡಿ ಎನ್ನುತ್ತಿದ್ದರು, ಈಗ ಖಾತೆಗೆ ಹಣ ಹಾಕಿದರೂ ದಂಡ, ತೆಗೆದರೂ ದಂಡ ಕಟ್ಟಬೇಕು “ಎಂದರು