ಕಲಬುರಗಿ,ಮಾ.26-ಕನ್ನಡ ಸಾಹಿತ್ಯ ಪರಂಪರೆಯಲ್ಲಿ 12ನೇ ಶತಮಾನದಲ್ಲಿ ಹೊರಹೊಮ್ಮಿದ ವಚನ ಸಾಹಿತ್ಯ ವಿಶಿಷ್ಟ ಶೈಲಿಯಿಂದ ಸಂಚಲನ ಮೂಡಿಸಿದೆ. 12ನೇ ಶತಮಾನದ ಜನಪರ, ಜೀವಪರ, ಸಾಮಾಜಿಕ ಕಾಳಜಿಯೊಂದಿಗೆ ಹೊರಹೊಮ್ಮಿದ ವಚನ ಚಳವಳಿ ಸಾಹಿತ್ಯ ಕನ್ನಡದಲ್ಲಿ ಪ್ರಖರ ಚಿಂತನೆಗಳಿಂದ ಗಮನ ಸೆಳೆಯುವುದರೊಂದಿಗೆ ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಒದಗಿಸಿಕೊಟ್ಟಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕÀ ಡಾ.ವಿಜಯಕುಮಾರಿ ಕರಿಕಲ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕ ಘಟಕ ಹಾಗೂ ವಿಶ್ವನಾಥರೆಡ್ಡಿ ಮುದ್ನಾಳ್ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಒಂದು ದಿನದ ರಾಜ್ಯಮಟ್ಟದ “ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ”ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಹಾಗೂ “ಶರಣಾರ್ಥ ಸಂಪದ” ಎನ್ನುವ ಸಂಶೋಧನಾ ಪ್ರಬಂಧ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾಜ ವಿರೋಧಿ ಜಡ ವ್ಯವಸ್ಥೆಯ ಬದಲಾವಣೆಗಾಗಿ ಯಾವ ರೀತಿ ಹೋರಾಟ ಅವಲಂಬಿಸುತ್ತಿದೆ ಎಂಬುದಕ್ಕೆ ಈ ಚಳುವಳಿಯೇ ಸಾಕ್ಷಿ. ಉತ್ಪಾದನಾ, ಕ್ರೂಡೀಕರಣ ತೆರಿಗೆ, ಕೃಷಿ, ಆಯಗಾರಿಕೆ, ಸ್ವಯಂ ಉದ್ಯೋಗ, ವ್ಯವಹಾರ ಹೀಗೆ ಹತ್ತು ಹಲವು ಆರ್ಥಿಕ ನೀತಿಗಳನ್ನು ರೂಡಿಸಿಕೊಂಡ ವಚನ ಚಳುವಳಿಯನ್ನು 900 ವರ್ಷಗಳ ನಂತರ ಮತ್ತೊಮ್ಮೆ ಸಿಂಹಾಲೋಕನ ಕ್ರಮದಿಂದ ಅವಲೋಕಿಸುವ, ಚರ್ಚೆಗೊಳಪಡಿಸುವ ಮಹತ್ವಾಕಾಂಕ್ಷೆಯಿಂದಾಗಿ “ಶರಣ ಸಾಹಿತ್ಯದಲ್ಲಿ ಅರ್ಥ ವ್ಯವಸ್ಥೆ” ಅಡಿಯಲ್ಲಿ ವಿಚಾರ ಸಂಕಿರಣದ ಪುನರಾವಲೋಕನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾದ ಕಾರ್ಯ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ರೋಲೆಕರ್ ನಾರಾಯಣ ಅವರು ಮಾತನಾಡುತ್ತ, ವಚನಕಾರರ ಪ್ರತಿಯೊಂದು ವಚನವು ತನ್ನದೇ ಆದ ವಿಶಿಷ್ಟ ಅಂಕಿತವನ್ನು ಪಡೆದಿದೆ. ಶತಶತಮಾನಗಳಿಂದ ಮನುಷ್ಯನಿಗೆ ಕಾಡಿದ ಪ್ರಶ್ನೆಗಳಿಗೂ ವಚನಗಳು ಪ್ರತ್ಯುತ್ತರ ನೀಡಿವೆ. ಪರಿಹಾರೋಪಾಯಗಳನ್ನು ಸೂಚಿಸುವೆ. ಕಾಲಾನುಕಾಲದಿಂದ ಪ್ರಭುತ್ವ ಹೊಂದಿದ ಒತ್ತಡಗಳಿಗೆ ನೀಡಿದ ವೇದನೆಗಳಿಗೆ ಸಂವೇದನೆಗಳಾಗಿರುವ ಇವು 12ನೇ ಶತಮಾನದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ರೂಪಿಸಿದ ಹಿನ್ನೆಲೆಯಲ್ಲಿ ಆಧುನಿಕ ಅರ್ಥ ವ್ಯವಸ್ಥೆಗೂ ಕೂಡ ಒರೆ ಹಚ್ಚಬಲ್ಲವೂ ಎಂಬ ಸದಾಶಯವೇ ಈ ವಿಚಾರ ಸಂಕೀರ್ಣದ ಧ್ಯೇಯೋದ್ದೇಶವಾಗಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ಡಾ.ಮಲ್ಲಿಕಾರ್ಜುನ ವಡ್ಡನಕೇರಿ ಅವರು ಮಾತನಾಡುತ್ತ ಪ್ರಸ್ತುತ ಪ್ರಕ್ಷುದ್ಧ ಸ್ಥಿತಿಯಲ್ಲಿ ವಚನಗಳು ನಮಗೆ ಅರ್ಥ ಸಮಾನತೆಗೆ ದಾರಿದೀಪವಾಗಬಲ್ಲವೂ ಎಂಬುದರ ಅವಲೋಕನವು ಹಿಂದೆಂದಿಗಿಂತಲೂ ಇಂದು ತುಂಬಾ ಅಗತ್ಯವಾಗಿದೆ. ವೈಚಾರಿಕತೆಯಿಂದ ಕೂಡಿದ ಅಭಿವೃದ್ದಿ ಪರವಾಗಿ ಮನುಷ್ಯರಿಗಿರುವ ಸಮಾಜವನ್ನು ವಚನ ಚಳುವಳಿ ಬಯಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಸವರಾಜ ಮಠಪತಿಯವರು ವಹಿಸಿದ್ದರು. ಡಾ.ಶರಣಬಸಪ್ಪ ವಡ್ಡನಕೇರಿ, ಬಸವರಾಜ ಮರಬದ, ಡಾ.ಎಸ್.ಎ.ಪಾಟೀಲ್, ಡಾ.ಅಮೃತ ಕಟಗೆ, ಡಾ.ನೀಲಮ್ಮ ಪಾಟೀಲ್, ಡಾ.ಚಿದಾನಂದ ಚಿಕ್ಕಮಠ, ಪೆÇ್ರ.ಕಾಶಿನಾಥ ಪಾಟೀಲ ಮೊದಲಾದವರು ಇದ್ದರು.ಡಾ. ಪ್ರೇಮಾ ಅಪಚಂದರವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಮಲಿಂಗ ನಿರೂಪಿಸಿದರು