ಅರ್ಥಪೂರ್ಣವಾಗಿ ನಡೆದ ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಚಾಮರಾಜನಗರ, ಮಾ.03:- ಚಾಮರಾಜನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿಂದು ಅರ್ಥಪೂರ್ಣವಾಗಿ ನಡೆಯಿತು.
ಸಮ್ಮೇಳನದ ಅಧ್ಯಕ್ಷರಾದ ಕೊತ್ತಲವಾಡಿ ಶಿವಕುಮಾರ್ ಅವರನ್ನು ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಿಂದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾರಂಗ ಮಂದಿರದವರೆಗೆ ಕಲಾ ತಂಡಗಳೊಡನೆ ಕರೆತಂದ ಭವ್ಯ ಮೆರವಣಿಗೆಗೆ ಶಾಸಕ ಸಿ. ಪುಟ್ಟರಂಗಶೆಟ್ಟಿಅವರು ಚಾಲನೆ ನೀಡಿದರು.
ನಂತರ ವರನಟಡಾ. ರಾಜ್‍ಕುಮಾರ್‍ಜಿಲ್ಲಾರಂಗಮಂದಿರದಲ್ಲಿ ನಡೆದ ಸಮಾರಂಭವನ್ನು ಮೈಸೂರಿನ ವಿದ್ವಾಂಸರಾದಡಾ. ಪ್ರಧಾನಗುರುದತ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಅವರು ನಮ್ಮ ನಾಡು ನುಡಿಯನ್ನುಗೌರವಿಸಬೇಕು. ಭವ್ಯ ಪರಂಪರೆ, ಸಂಸ್ಕøತಿ ಹಿರಿಮೆ ಹೊಂದಿರುವಚಾಮರಾಜನಗರಜಿಲ್ಲೆ ಸಾಧನೆಯಲ್ಲಿಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಚಾಮರಾಜನಗರತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದಕೊತ್ತಲವಾಡಿ ಶಿವಕುಮಾರ್ ಅವರು ಮಾತನಾಡಿಚಾಮರಾಜನಗರಜಿಲ್ಲೆ ಸಾಹಿತ್ಯಕವಾಗಿ ಸಾಂಸ್ಕøತಿಕ, ರಾಜಕೀಯ, ಆರ್ಥಿಕ ಹಾಗೂ ಐತಿಹಾಸಿಕವಾಗಿ ತನ್ನದೇಆದ ಮಹತ್ವವನ್ನು ವೈವಿದ್ಯತೆ ಹಿನ್ನೆಲೆಯನ್ನು ಹೊಂದಿದೆ. ಬಹುತ್ವ ವೈವಿದ್ಯತೆ, ವೈವಿದ್ಯತೆಯಲ್ಲಿಏಕತೆ ನಮ್ಮ ನೆಲದಗುಣಎಂದÀರು.
ಜಗತ್ತಿನಎಲ್ಲಾ ಸಾಹಿತ್ಯದ ಮೂಲ ಜನಪದ ಸಾಹಿತ್ಯಅಂತಹಜಾನಪದ ಸಂಪತ್ತಿನಆಗರ ಈ ನೆಲವಾಗಿದೆ. ಜಾನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿ ಸದಾಚಾರ, ಸತ್ಕಾರ್ಯ, ಸತ್‍ಚಿಂತನೆ, ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆಯ ಮಹದೇಶ್ವರ, ಮಂಟೇಸ್ವಾಮಿಯಂತಹ ಜಂಗಮ ಶ್ರೇಷ್ಠರ, ಸಂತ ಮºಹಂತರ ಪವಿತ್ರ ಪ್ರಾಂತ್ಯ ನಮ್ಮಚಾಮರಾಜನಗರ.
ಇಡೀ ಜಾನಪದ ಲೋಕವೇ ನಿಬ್ಬೆರಗಾಗುವಂತಹ ವ್ಯಾಪ್ತಿಯುಳ್ಳ ಮಹದೇಶ್ವರ ಹಾಗೂ ಮಂಟೇಸ್ವಾಮಿಯ ಕಾವ್ಯಗಳು ಸೃಷ್ಠಿಯಾದ ಹೊನ್ನಿನ ಮಣ್ಣುಚಾಮರಾಜನಗರವಾಗಿದೆಎಂದು ತಿಳಿಸಿದರು.
ಎರಡನೇ ಅಲ್ಲಮನೆಂದು ಖ್ಯಾತಿ ಪಡೆದತೊಂಟದ ಸಿದ್ದಲಿಂಗ ಯತಿ, ಮಲೆಯೂರು ಶ್ರುತಕೀರ್ತಿ, ದೇವಚಂದ್ರ, ತಮ್ಮ ನಟನೆ, ಗಾಯನ, ಸರಳ ಸಜ್ಜನಿಕೆಯ ಮೂಲಕ ಜಗತ್ಪ್ರಸಿದ್ದಿ ಪಡೆದ ನಟ ಸಾರ್ವಭೌಮ ಡಾ. ರಾಜ್‍ಕುಮಾರ್ ನನ್ನೂರಿನ ಪಕ್ಕದ ಗಾಜನೂರಿನವರು. ಆಧುನಿಕ ಕನ್ನಡ ಸಾಹಿತ್ಯದಲ್ಲಿಜಿಲ್ಲೆಗೆ ಹೆಸರುತಂದವರುಡಾ. ಪ್ರಭುಶಂಕರ, ಪ್ರೊ. ಮಲೆಯೂರು ಗುರುಸ್ವಾಮಿ, ಮೂಡ್ನಾಕೂಡು ಚಿನ್ನಸ್ವಾಮಿ, ಹರವೆದೇವಯ್ಯ ಇನ್ನೂ ಅನೇಕರು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಹಿತ್ಯಕ್ಷೇತ್ರ ಮಾತ್ರವಲ್ಲದೇ ಕೃಷಿ, ಕೈಗಾರಿಕೆ, ವ್ಯಾಪಾರ, ವಾಣಿಜ್ಯ, ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲೂ ಸಾಧನೆ ಮಾಡಿಕೊಡುಗೆ ನೀಡಿರುವ ಅನೇಕ ಮಹನೀಯರು ನಮ್ಮ ತಾಲೂಕಿನ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಕೊತ್ತಲವಾಡಿ ಶಿವಕುಮಾರ್ ತಿಳಿಸಿದರು.
ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಶೈಲಕುಮಾರ್ ಆಶಯ ನುಡಿಗಳನ್ನಾಡಿದರು. ನಿಕಟಪೂರ್ವಸಮ್ಮೇಳನಾಧ್ಯಕ್ಷ ಮಂಜುಕೋಡಿ ಉಗನೆ ಅವರು ಚಾಮರಾಜನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಕೊತ್ತಲವಾಡಿ ಶಿವಕುಮಾರ್ ಅವರಿಗೆ ನಾಡಧ್ವಜವನ್ನು ಹಸ್ತಾಂತರಿಸಿದರು.
ತಾಲೂಕುಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ, ಸಾಹಿತಿ ಸೋಮಶೇಖರ ಬಿಸಿಲವಾಡಿ, ವಿಶ್ರಾಂತ ಪ್ರಾಚಾರ್ಯರಾದ ಎ.ಎಂ. ನಾಗಮಲ್ಲಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ. ಬಸವರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ತಹಶೀಲ್ದಾರ್ ಐ.ಇ. ಬಸವರಾಜು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ವೃತ್ತ ನಿರೀಕ್ಷಕರಾದ ಶ್ರೀಕಾಂತ್ ನಾಡಧ್ವಜಾರೋಹಣ ನೆರವೇರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್‍ಎನ್. ಋಗ್ವೇದಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.