ಅರ್ಥಪೂರ್ಣವಾಗಿ ಜಯಂತಿ ಆಚರಿಸಲು ತೀರ್ಮಾನ

ನವಲಗುಂದ,ಏ3 : ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಾ ಆಡಳಿತ ಆಚರಿಸುವ ಡಾ. ಬಾಬು ಜಗಜೀವನರಾವ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ರವರ ಜಯಂತೋತ್ಸವದ ಕಾರ್ಯಕ್ರಮ ಪೂರ್ವಭಾವಿ ಸಭೆಯು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಜರುಗಿತು.
ಏ 5 ರಂದು ಡಾ.ಬಾಬು ಜಗಜೀವನರಾವ ಹಾಗೂ ಏ 14 ರಂದು ಡಾ.ಬಿ ಆರ್ ಅಂಬೇಡ್ಕರ್ ರವರ ಜಯಂತೋತ್ಸವವನ್ನು ಚುನಾವಣೆ ನೀತಿ ಸಂಹಿತೆ ಹಿನ್ನಲೆ ತಾಲ್ಲೂಕಾ ಆಡಳಿತದಿಂದ ಕಚೇರಿ ಸಭಾಂಗಣದಲ್ಲಿಯೇ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ ಬಾಬು ಜಗಜೀವನರಾವ ಹಾಗೂ ಬಿ ಆರ್ ಅಂಬೇಡ್ಕರರವರ ಜಯಂತೋತ್ಸವವನ್ನು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಎಲ್ಲರ ಅಭಿಪ್ರಾಯದಂತೆ ಸರಳವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದರು
ಸಮಾಜ ಮುಖಂಡರಾದ ಹನಮಂತ ಕೆಳಗೇರಿ, ಸುಭಾಸ್ ದುಬ್ಬದಮಟ್ಟಿ, ನಿಂಗಪ್ಪ ಕೆಳಗೇರಿ, ಶಿವು ಪೂಜಾರ, ಸಂತೋಷ ಮಾದರ, ದಿಲೀಪ್ ರತ್ನಾಕರ್, ಎಕ್ಕೆರಪ್ಪ ನಾಗಣ್ಣವರ, ಅರ್ಜುನ್ ಮಾದರ, ಕೃಷ್ಣ ಮಾದರ, ಸತೀಶ್ ಶಿರಕೋಳ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.