ಅರ್ಜುನ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು : ಡಿ.10:- ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನನ ಸಾವಿನ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಅರಮನೆ ಬಳಿ ಇರುವ ರಾಜಕುಮಾರ್ ಉದ್ಯಾನವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮೈಸೂರು ದಸರಾ ಮಹೋತ್ಸವದಲ್ಲಿ 8 ವರ್ಷಗಳ ಕಾಲ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಯನ್ನು ನಾಡಿನ ಜನತೆಯ ಮನಗೆದ್ದಿದ್ದ ಅರ್ಜುನನ ಅಕಸ್ಮಿಕ ಸಾವು ದಿಗ್ಬ್ರಮೆ ಮೂಡಿಸಿದೆ.
ಶಕ್ತಿ, ಸಾಮಥ್ರ್ಯ, ಗಾಂಭಿರ್ಯತೆಗೆ ಹೆಸರುವಾಸಿಯಾಗಿದ್ದ ಅರ್ಜುನನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರವಾಗಿದೆ ಎಂದು ಕಿಡಿ ಕಾರಿದರು.
ಅರ್ಜುನನ ಪಾತ್ರ ಕೇವಲ ದಸರಾಗೆ ಮಾತ್ರ ಸೀಮಿತವಾಗಿರಲಿಲ್ಲ. ಅರಣ್ಯ ಇಲಾಖೆಗೆ ಹಾಗೂ ಕಾಡಿನ ಅಂಚಿನ ಪ್ರದೇಶಗಳಲ್ಲಿ ಹುಲಿ, ಕಾಡಾನೆ ಸೆರೆ ಬಳಸಿಕೊಳ್ಳಲಾಗುತ್ತಿತ್ತು. ಇಲಾಖೆ ಕೊಟ್ಟ ಕೆಲಸವನ್ನು ಅತ್ಯಂತ ನಿಷ್ಠೆ ಹಾಗೂ ಪ್ರಮಾಣಿಕವಾಗಿ ನಿಭಾಯಿಸಿ ಇಲಾಖೆಯ ನಂಬಿಕೆಗೆ, ವಿಶ್ವಾಸಕ್ಕೆ ಪಾತ್ರನಾಗಿದ್ದ.
ದುರುಂತವೆಂದರೆ ಇದಕ್ಕೆ ತದ್ವಿರುದ್ದವಾಗಿ ಅರಣ್ಯ ಇಲಾಖೆಯೇ ಅರ್ಜುನನ ಸೇವೆಯನ್ನು ಸರ್ಮಪಕವಾಗಿ ಬಳಸಿಕೊಂಡು ಅರ್ಜುನನ ಸುರಕ್ಷತೆಯ ಬಗ್ಗೆ ನಿಗಾವಹಿಸದೆ ಆತನ ದಾರುಣ ಸಾವಿಗೆ ಕಾರಣವಾಗಿರುವುದು ದೊಡ್ಡ ದುರಂತ. ರಾಜ್ಯದ ಅರಣ್ಯ ಇಲಾಖೆ ಒಂದು ಕಾಲದಲ್ಲಿ ಅನೆ ಹಿಡಿದು ಪಳಗಿಸುವುದರಲ್ಲಿ ದೇಶಕ್ಕೇ ಹೆಸರುವಾಸಿಯಾಗಿತ್ತು.
ನುರಿತ ಸಾಕಾನೆಗಳ, ಮಾವತರು, ಕಾವಾಡಿಗಳು ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಕಾಡಾನೆ ಹಿಡಿದು ಪಳಗಿಸಿದ ನಿರ್ದೆಶನಗಳಿವೆ. ಆದರೆ ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ಅನುಭವಿ ವೈದ್ಯರುಗಳ ಕೊರತೆಯಿಂದ ಇಂತಹ ರ್ದುಘಟನೆಗಳು ನಡೆಯುತ್ತಿವೆ. ಅರ್ಜುನನ ಅತ್ಮಕ್ಕೆ ಶಾಂತಿ ಸಿಗಬೇಕಾದರೆ ಅವಬ ಅಕಸ್ಮಿಕ ಸಾವಿಗೆ ಕಾರಣರಾದವರು ಯಾರೇ ಆಗಿದ್ದರೂ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಮುಖಂಡರುಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಅರವಿಂದ್, ಕಾವೇರಮ್ಮ, ಮಾಲಿನಿ, ಪುಷ್ಪಲತಾ, ಹರೀಶ್, ಸ್ವಾಮಿ ಗೈಡ್, ಮಹದೇವಸ್ವಾಮಿ, ಸುನೀಲ್, ಶಿವಣ್ಣ ನಾಯಕ, ರಾಜೇಶ್, ಗೋವಿಂದರಾಜು, ಮದನ್ ಸೇರಿದಂತೆ ಹಲವರು ಭಾಗವಹಿಸಿದ್ದರು.