ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಜಗಳ! ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಜೊತೆಗೂಡಿ ಆಚರಿಸುವುದಿಲ್ಲವಂತೆ!!

ಬಾಲಿವುಡ್‌ನ ಹಾಟೆಸ್ಟ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಜಗತ್ತಿಗೆ ಮರೆಮಾಚಿದ್ದ ಈ ಜೋಡಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಜೋಡಿಯ ಬಗ್ಗೆ ಭಾರೀ ಸುದ್ದಿಯೊಂದು ಹೊರಬೀಳುತ್ತಿದೆ. ಇತ್ತೀಚಿನ ದಿನಗಳಲ್ಲಿ, ಅರ್ಜುನ್ ಮತ್ತು ಮಲೈಕಾ ನಡುವೆ ಸ್ವಲ್ಪ ಜಗಳ ನಡೆಯುತ್ತಿದ್ದು, ಮಲೈಕಾರಿಗೆ ಅರ್ಜುನ್ ಬಗ್ಗೆ ತುಂಬಾ ಹೊಟ್ಟೆಕಿಚ್ಚು ಹುಟ್ಟಿದೆಯಂತೆ.
ವಾಸ್ತವವಾಗಿ, ಟಾಕೀಸ್ ಗಳು ತೆರೆದ ನಂತರ, ಚಲನಚಿತ್ರಗಳ ಕೆಲಸವು ವೇಗವನ್ನು ಪಡೆದುಕೊಂಡಿದೆ. ಕಳೆದ ಹಲವು ತಿಂಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಬಾಲಿವುಡ್ ನ ಕಾಮಗಾರಿಗಳು ಇದೀಗ ತ್ವರಿತವಾಗಿ ಪೂರ್ಣಗೊಳ್ಳುತ್ತಿವೆ. ಅರ್ಜುನ್ ಕಪೂರ್ ಇತ್ತೀಚೆಗೆ ಮೋಹಿತ್ ಸೂರಿ ಅವರ ’ಏಕ್ ವಿಲನ್ ರಿಟರ್ನ್ಸ್’ ಫಿಲ್ಮ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದಾದ ನಂತರವೂ ಅರ್ಜುನ್‌ಗೆ ಬಿಡುವು ಸಿಕ್ಕಿಲ್ಲ. ಅವರು ಮುಂಬರುವ ಹಲವು ಯೋಜನೆಗಳ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ, ಈ ಕಾರಣದಿಂದಾಗಿ ಅವರು ಈ ಬಾರಿ ಕ್ರಿಸ್ಮಸ್ ಮತ್ತು ಹೊಸ ವರ್ಷದಂದು ತುಂಬಾ ಬ್ಯುಸಿಯಾಗಿರುತ್ತಾರೆ.
ಅಂತಹ ಪರಿಸ್ಥಿತಿಯಲ್ಲಿ, ಅವರು ನ್ಯೂ ಇಯರ್ (ವರ್ಷಾಂತ್ಯವನ್ನು) ಆಚರಿಸಲು ಸಾಧ್ಯವಾಗುವುದಿಲ್ಲ. ಮಲೈಕಾ ಕೂಡ ಅರ್ಜುನ್ ಜೊತೆಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಬಯಸಿದ್ದರು, ಆದರೆ ಅರ್ಜುನ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಆಚರಣೆ ಮಾಡಲು ಸದ್ಯ ನಿರಾಕರಿಸಿದ್ದಾರೆ. ಅರ್ಜುನ್‌ರ ನಿರಾಕರಣೆಯಿಂದಾಗಿ ಮಲೈಕಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ, ಅರ್ಜುನ್ ಕಪೂರ್ ನಟಿ ಮತ್ತು ಗೆಳತಿ ಮಲೈಕಾ ಅರೋರಾ ಅವರೊಂದಿಗೆ ದೀಪಾವಳಿ ಪಾರ್ಟಿಯನ್ನು ಆಚರಿಸುವ ಮೂಲಕ ಸುದ್ದಿ ಮಾಡಿದ್ದರು. ಅವರ ಸಾಂಪ್ರದಾಯಿಕ ಉಡುಪು ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು.
ಆದರೆ ಇದೀಗ ಅರ್ಜುನ್ ಮತ್ತು ಮಲೈಕಾ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಒಟ್ಟಿಗೆ ಆಚರಿಸಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ.ಇಬ್ಬರೂ ತಮ್ಮ ಸಂಬಂಧವನ್ನು ೨೦೧೮ ರಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಅಧಿಕೃತಗೊಳಿಸಿದ್ದಾರೆ. ವಿಚ್ಛೇದಿತ ಮಲೈಕಾ ಅರೋರಾ ಅರ್ಜುನ್ ಕಪೂರ್ ಗಿಂತ ೧೨ ವರ್ಷ ದೊಡ್ಡವರು.
ಆದಾಗ್ಯೂ, ಈ ವಯಸ್ಸಿನ ಅಂತರವು ಅವರ ಸಂಬಂಧದ ರೀತಿಯಲ್ಲಿ ಅಡ್ಡಿ ಬರುವುದಿಲ್ಲ. ಅನೇಕ ಬಾರಿ ಮಲೈಕಾ ತನ್ನ ವಯಸ್ಸಿಗಿಂತ ಚಿಕ್ಕ ವಯಸ್ಸಿನ ಗೆಳೆಯನೊಂದಿಗೆ ಡೇಟಿಂಗ್ ಮಾಡಿದ್ದಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದರು. ಈ ಟ್ರೋಲಿಂಗ್ ಕೂಡ ಇಬ್ಬರ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಲಿಲ್ಲ. ಕಳೆದ ವರ್ಷ, ಲಾಕ್‌ಡೌನ್ ಸಮಯದಲ್ಲಿ ಮಲೈಕಾ ಮತ್ತು ಅರ್ಜುನ್ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದರು. ಮಲೈಕಾ ಕೂಡ ತಮ್ಮ ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದ್ದರು. ಇಬ್ಬರೂ ಆಗಾಗ್ಗೆ ರೋಮ್ಯಾಂಟಿಕ್ ವಿಹಾರಕ್ಕೆ ಹೋಗುತ್ತಾರೆ. ಆಗಾಗ್ಗೆ ಅಭಿಮಾನಿಗಳು ಅರ್ಜುನ್ ಮತ್ತು ಮಲೈಕಾ ಅವರ ಮದುವೆಯ ಬಗ್ಗೆ ಪ್ರಶ್ನಿಸುತ್ತಾರೆ. ಈ ಸಂಬಂಧಕ್ಕೆ “ಮದುವೆ ಎಂದು ಹೆಸರಿಡುವ ಆತುರವಿಲ್ಲ” ಎಂದು ಮಲೈಕಾ ಮತ್ತು ಅರ್ಜುನ್ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ಪತಿ ಆದಿತ್ಯ ಧರ್ ಅವರು ಯಾಮಿ ಗೌತಮ್ ರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು

ಬಾಲಿವುಡ್ ನಟಿ ಯಾಮಿ ಗೌತಮ್ ಮದುವೆಯಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ, ಜೊತೆಗೆ ಅವರು ತಮ್ಮ ಲುಕ್‌ಗಾಗಿ ಅಭಿಮಾನಿಗಳ ಪ್ರಶಂಸೆಯನ್ನೂ ಪಡೆಯುತ್ತಿದ್ದಾರೆ.
ಅವರು ಮದುವೆಯ ನಂತರ ಮೊನ್ನೆ ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ, ಅವರ ಸುಂದರವಾದ ಫೋಟೋಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.


ಹೌದು, ನವೆಂಬರ್ ೨೮ ರಂದು ನಟಿ ಯಾಮಿ ಗೌತಮ್ ತಮ್ಮ ೩೩ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದಿತ್ಯ ಧರ್ ಅವರನ್ನು ಮದುವೆಯಾದ ನಂತರ ಇದು ಯಾಮಿ ಅವರ ಮೊದಲ ಹುಟ್ಟುಹಬ್ಬ.
ಅದೇ ಸಮಯದಲ್ಲಿ ಅವರ ಪತಿ ಆದಿತ್ಯ ತನ್ನ ಪತ್ನಿಯ ಪ್ರೀತಿಯ ಈ ದಿನವನ್ನು ಹೆಚ್ಚು ವಿಶೇಷವಾಗಿಸಲು ಯಾವುದೇ ಅವಕಾಶವನ್ನು ಕೈಬಿಡಲಿಲ್ಲ. ಯಾಮಿ ಗೌತಮ್ ಅವರೇ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಯಾಮಿ ಹುಟ್ಟುಹಬ್ಬಕ್ಕೆ ಆದಿತ್ಯ ಧರ್ ಮೊದಲೇ ಸಕಲ ಸಿದ್ಧತೆ ಮಾಡಿಕೊಂಡಿರುವುದನ್ನು ಕಾಣಬಹುದು. ಯಾಮಿ ತನ್ನ ೩೩ ನೇ ಹುಟ್ಟುಹಬ್ಬವನ್ನು ಪತಿ ಆದಿತ್ಯ ಮತ್ತು ಕುಟುಂಬ ಸದಸ್ಯರೊಂದಿಗೆ ಈ ಬಾರಿ ಆಚರಿಸಿದ್ದಾರೆ. ವಿಶೇಷವೆಂದರೆ, ಯಾಮಿ ಈಗಾಗಲೇ ಎಲ್ಲಾ ಕೆಲಸಗಳಿಂದ ವಿರಾಮ ತೆಗೆದುಕೊಂಡಿದ್ದಾರೆ. ಅತ್ತ ಮಗಳ ಹುಟ್ಟುಹಬ್ಬಕ್ಕೆ ಆಕೆಯ ತಾಯಿ ಕೂಡ ಚಂಡೀಗಢದಿಂದ ಮುಂಬೈಗೆ ಬಂದಿದ್ದರು. ಈ ಬಾರಿಯ ಹುಟ್ಟುಹಬ್ಬದಂದು ಪತಿ ಮತ್ತು ಅತ್ತೆಯ ಜೊತೆ ಇದ್ದು ಇಡೀ ದಿನ ಎಂಜಾಯ್ ಮಾಡಿದ್ದಾಗಿ ಹೇಳಿದರು.
ಯಾಮಿ ತನ್ನ ಕುಟುಂಬದೊಂದಿಗಿರುವ ಕುರಿತು ಮಧ್ಯರಾತ್ರಿಯ ಹುಟ್ಟುಹಬ್ಬದ ಆಚರಣೆಯ ಗ್ಲಿಂಪ್ಸಸ್ ನೀಡಿದ್ದಾರೆ. ಇದಲ್ಲದೇ ಅವರ ಫಿಲ್ಮ್ ತಂಡ ಯಾಮಿಗೆ ಸರ್ಪ್ರೈಸ್ ಬರ್ತ್ ಡೇ ಪ್ಲಾನ್ ಕೂಡಾ ಮಾಡಿತ್ತು. ಯಾಮಿ ಗೌತಮ್ ಅವರೂ ತಂಡದ ಸದಸ್ಯರೊಂದಿಗೆ ಹಲವು ಪೋಸ್ ಕೊಟ್ಟಿದ್ದಾರೆ. ಈ ಸಲ ಯಾಮಿ ತನ್ನ ಹುಟ್ಟುಹಬ್ಬದಂದು ಎಂದಿಗಿಂತ ಹೆಚ್ಚು ಸಂತೋಷದಿಂದ ಇದ್ದಂತೆ ಕಾಣುತ್ತಿದ್ದರು.