ಅರ್ಜುನ್ ಕಪೂರ್ ತನ್ನ ದೀರ್ಘಕಾಲದ ಗರ್ಲ್ ಫ್ರೆಂಡ್ ಮಲೈಕಾ ಅರೋರಾರಿಂದ ಏನು ಕಲಿತರು?

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ದೀರ್ಘಕಾಲದಿಂದ ಸ್ನೇಹಿತರು. ೨೦೧೯ ರಲ್ಲಿ ಅವರು ತಮ್ಮ ಸಂಬಂಧವನ್ನು ಆಫೀಶಿಯಲ್ ಆಗಿ ಘೋಷಿಸಿದ್ದರು. ಇವರಿಬ್ಬರೂ ಆಗಾಗ ಜೊತೆಯಾಗಿಯೇ ಹೊರಗಡೆ ತಿರುಗಾಟ ಮಾಡುತ್ತಿರುವುದನ್ನು ಬಾಲಿವುಡ್ ಜನರೂ ಗಮನಿಸಿದ್ದಾರೆ.
ಎಲ್ಲಿಯವರೆಗೆ ಅಂದರೆ ಕಳೆದ ವರ್ಷ ಲಾಕ್ಡೌನ್ ಸಮಯ ಒಂದೇ ಪ್ಲ್ಯಾಟ್ ನಲ್ಲಿ ಇವರಿಬ್ಬರು ವಾಸಮಾಡುತ್ತಿದ್ದರು. ಇತ್ತೀಚೆಗೆ ಒಂದು ಸಂದರ್ಶನದಲ್ಲಿ “ನಿಮ್ಮ ಗರ್ಲ್ ಫ್ರೆಂಡ್ ರಿಂದ ಏನನ್ನು ಕಲಿತಿರಿ?” ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಾ ಹೀಗೆ ಹೇಳಿದ್ದಾರೆ-
“ನನಗೆ ಅವರು ಎಷ್ಟು ಡಿಗ್ನಿಫೈ ಆಗಿದ್ದಾರೆ ಎನ್ನುವುದು ಇಷ್ಟವಾಗಿದೆ. ೨೦ ವರ್ಷದಿಂದ ಅವರು ಕೆಲಸ ಮಾಡಲು ಆರಂಭಿಸಿದ ದಿನಗಳಿಂದ ಹಿಡಿದು ಈತನಕವೂ ಹಾಗೆಯೇ ಇದ್ದಾರೆ. ಒಬ್ಬರು ಸ್ವತಂತ್ರ ಮಹಿಳೆಯಾಗಿ ಅವರಿಗೆ ಅವರದೇ ಆದ ಪರ್ಸನಾಲಿಟಿ ಇದೆ.”
ಮುಂದುವರಿದು ಹೇಳುತ್ತಾರೆ- “ಮಲೈಕಾ ಅವರು ಎಂದೂ ದೂರು ಹೇಳಿದ್ದನ್ನೇ ತಾನು ಕಂಡಿಲ್ಲ” ಎಂದು.
“ಅವರು ಡಿಗ್ನಿಟಿ ಯ ಜೊತೆ ತಲೆಯೆತ್ತಿ ಬದುಕುತ್ತಿದ್ದಾರೆ. ಬದುಕನ್ನು ತಮ್ಮದೇ ರೀತಿಯಲ್ಲಿ ಸುಂದರವಾಗಿ ಬದುಕುತ್ತಿದ್ದಾರೆ. ನಾನು ಪ್ರತಿದಿನವೂ ಅವರಿಂದ ಕಲಿಯುತ್ತಿದ್ದೇನೆ”.ಎನ್ನುತ್ತಾರೆ. ಅರ್ಜುನ್ ಗೆ ಮಲೈಕಾರನ್ನು ಎಷ್ಟು ಹೊಗಳಿದರೂ ಸಾಲದು.

ಫಾತಿಮಾ ಸನಾ ಶೇಖ್ ಕೂಡಾ ಸೋಶಲ್ ಮೀಡಿಯಾದಿಂದ ದೂರವಾದರು

’ದಂಗಲ್’ ಮತ್ತು ’ಠಂಗ್ಸ್ ಆಫ್ ಹಿಂದೋಸ್ತಾಂ…..’ ಇಂತಹ ಫಿಲ್ಮ್ ಗಳಲ್ಲಿ ಅಭಿನಯಿಸಿರುವ ಫಾತಿಮಾ ಸನಾ ಶೇಖ್ ಸೋಶಿಯಲ್ ಮೀಡಿಯಾಕ್ಕೆ ಬ್ರೇಕ್ ನೀಡಿದ್ದಾರೆ. ಅವರು ತನ್ನ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ -“ಸೋಶಿಯಲ್ ಮೀಡಿಯಾದಿಂದ ಒಂದು ಬ್ರೇಕ್ ಪಡೆಯುತ್ತಿದ್ದೇನೆ.

ಸ್ನೇಹಿತರೆ, ಸುರಕ್ಷಿತವಾಗಿರಿ” ಎಂದಿದ್ದಾರೆ. ಫಾತಿಮಾ ಇತ್ತೀಚಿಗೆ ೪ ಶಾರ್ಟ್ ಫಿಲ್ಮ್ ಗಳನ್ನು ಸೇರಿಸಿ ಮಾಡಿದ ಅಂಥೋಲಾಜಿ ’ಅಜೀಬ್ ದಾಸ್ತಾಂಸ್’ ನಲ್ಲಿ ಅಭಿನಯಿಸಿದ್ದರು. ಈ ವೆಬ್ ಸೀರಿಸ್ ನ ಪ್ರಮೋಷನ್ ಸಂದರ್ಭದಲ್ಲಿ ಒಂದು ಮಾತು ಬಹಿರಂಗ ಪಡಿಸಿದ್ದರು- “ತಾನು ’ಟಾಕ್ಸಿಕ್ ರಿಲೇಶನ್ ಶಿಪ್ಸ್ ನಲ್ಲಿ ಇದ್ದೇನೆ. ನೀವು ಇಂತಹ ಸಂಬಂಧದಲ್ಲಿ ಇರುವಾಗ ಎಲ್ಲವೂ ಬಹಳ ಕಷ್ಟವಾಗುತ್ತದೆ”ಎಂದು.

ರಶ್ಮಿ ರಾಕೆಟ್ ಫಿಲ್ಮ್ ನಲ್ಲಿ ತಾಪಸಿ ಪನ್ನೂ ಅವರ ಮೂರು ಲುಕ್: ಪಾತ್ರದ ಬಾಡೀ ಲ್ಯಾಂಗ್ವೆಜ್ ಅರ್ಥೈಸಲು ದಿನಕ್ಕೆ ಐದಾರು ಗಂಟೆಗಳ ತರಬೇತಿ ಪಡೆದಿದ್ದರಂತೆ

ನಟಿ ತಾಪಸಿ ಪನ್ನೂ ಅವರ ಜೋಳಿಗೆಯು ಈ ಸಮಯ ಫಿಲ್ಮ್ ಗಳಿಂದ ತುಂಬಿದೆ. ಒಂದೇ ಟೈಮ್ ಫ್ರೇಮ್ ನಲ್ಲಿ ಅವರ ಎರಡು ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಫಿಲ್ಮ್ ಗಳು ಬರುತ್ತಿವೆ. ಒಂದು – ಕ್ರಿಕೆಟನ್ನು ಮುಂದಿಟ್ಟು ’ಶಾಬಾಶ್ ಮಿಥು”, ಇನ್ನೊಂದು- ರಶ್ಮಿ ರಾಕೆಟ್.
ಫಿಲ್ಮ್ ರಶ್ಮಿ ರಾಕೇಟ್ ನಲ್ಲಿ ಗುಜರಾತ್ ನ ಕಛ್ ನಿಂದ ಬಹುದೂರ ಇರುವ ರಣ ಎಂಬಲ್ಲಿನ ಒಬ್ಬರ ಅಥ್ಲೆಟಿಕ್ಸ್ ಪಾತ್ರ.
ಆ ಕ್ಷೇತ್ರದಲ್ಲಿ ಧರಿಸುವ ಉಡುಪುಗಳಿಗಾಗಿ ಪ್ರೊಡಕ್ಷನ್ ಟೀಮು ಅಲ್ಲಿಗೆ ಭೇಟಿಕೊಟ್ಟು ಬಂದಿದೆ. ಕಚ್ಛ್ ಕ್ಷೇತ್ರದ ಫ್ಯಾಬ್ರಿಕ್ ಮತ್ತು ಜ್ಯುವೆಲ್ಲರಿಗೆ ವಿಶೇಷ ಆದ್ಯತೆ ನೀಡಲಾಗಿದೆ.


ರಶ್ಮಿ ರಾಕೆಟ್ ಶೂಟಿಂಗ್ ಜನವರಿಯಲ್ಲಿ ಪೂರ್ಣಗೊಂಡಿದೆ .ಇದರಲ್ಲಿ ತಾಪಸಿ ಪನ್ನೂ ಮೂರು ಬೇರೆ ಬೇರೆ ಲುಕ್ (ಅವತಾರ)ಗಳಲ್ಲಿ ಕಂಡು ಬರಲಿದ್ದಾರೆ.
ಮೊದಲ ಲುಕ್ ಕಛ್ಚ್ ನ ರಣ ಕ್ಷೇತ್ರಕ್ಕೆ ಸಂಬಂಧಿಸಿದ ಯುವತಿಯದ್ದು. ನೇಶನಲ್ ಲೆವೆಲ್ ನಲ್ಲಿ ಆಕೆಯ ಆಯ್ಕೆ ಆಗ್ತದೆ.
ಅಲ್ಲಿ ಇನ್ನೊಂದು ಲುಕ್ ದೊರೆಯುತ್ತದೆ.


ಆಕೆ ವಿಶ್ವಾದ್ಯಂತ ಪ್ರವಾಸ ಮಾಡುವ ಅವಕಾಶ ಸಿಕ್ಕಿದಾಗ ರಾಷ್ಟ್ರ ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪೋರ್ಟ್ಸ್ ಕಿಟ್ಸ್ ಬದಲಿಸಲಾಗುತ್ತದೆ.
ಈ ಫಿಲ್ಮ್ ನ ಶೂಟಿಂಗ್ ದೇಶದ ನಾಲ್ಕೈದು ಶಹರಗಳಲ್ಲಿ ನಡೆದಿದೆ .ಮುಂಬೈ ಪುಣೆ ರಾಂಚಿ ಮತ್ತು ಕಚ್ಛ್ ನ ರಣ ದಲ್ಲಿ ಶೂಟಿಂಗ್ ನಡೆದಿದೆ.


ಪ್ರೊಡಕ್ಷನ್ ಟೀಮ್ ತಿಳಿಸುವಂತೆ ೨೦೨೦ ರ ಲಾಕ್ಡೌನ್ ಮುಗಿದನಂತರ ಫಿಲ್ಮ್ ನ ಕಾಸ್ಟ್ ಕೂಡ ಏರಿದೆ. ಕಾಸ್ಟ್ಯೂಮ್ ಕೂಡ ಬದಲಿಸಲಾಯಿತು.
ತಾಪಸಿ ಪನ್ನೂ ಕಳೆದ ಸೆಪ್ಟೆಂಬರ್ ನಿಂದ ದಕ್ಷಿಣದ ಫಿಲ್ಮ್ ನಲ್ಲಿ ಕೆಲಸ ಮಾಡಿದ್ದರು .ಅಲ್ಲಿ ದಿನಕ್ಕೆ ೧೨ ಗಂಟೆಗಳ ಶೂಟಿಂಗ್ ನಲ್ಲಿ ನಿರತರಾಗಿದ್ದರು. ಅನಂತರ ರಶ್ಮಿ ರಾಕೆಟ್ ಪಾತ್ರದ ಕ್ಯಾರೆಕ್ಟರ್ ನ ಬಾಡಿ ಲ್ಯಾಂಗ್ವೇಜ್ ಗಾಗಿ ದಿನಕ್ಕೆ ಐದಾರು ಗಂಟೆಗಳ ಟ್ರೈನಿಂಗ್ ಕೂಡ ಪಡೆಯುತ್ತಿದ್ದರಂತೆ.