
ಬರಹಗಾರನಿಗೆ ಗಟ್ಟಿಯಾದ ನಿಲುವು ಅವಶ್ಯಕ
ರಾಯಚೂರು, ಆ.೬ – ಬರಹಗಾರನಿಗೆ ಗಟ್ಟಿಯಾದ ನಿಲುವು ಇರಬೇಕು ಅಂದಾಗ ಮಾತ್ರ ಒಳ್ಳೆ ಸಾಹಿತ್ಯ ರಚನೆಯಾಗುತ್ತದೆ ಎಂದು ಹಿರಿಯ ಸಾಹಿತಿ ವೀರಹನುಮಾನ ಹಿರಿಯ ಸಾಹಿತಿ ವೀರಹನುಮಾನ ಹೇಳಿದರು
ಅವರಿಂದು ನಗರದ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನ ರಾಯಚೂರು ವತಿಯಿಂದ ಬಶೀರ ಅಹ್ಮದ್ ಹೊಸಮನಿಯವರ ಅರ್ಜುನಾಯಣ ಕಥನ ಕಾವ್ಯ ಸಂಪುಟ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಬರಹಗಾರನಿಗೆ ಸೃಜನಶೀಲತೆ ಇರಬೇಕು.ರಾಯಚೂರು ಸಾಹಿತ್ಯ ಇಡಿ ರಾಜ್ಯಕ್ಕೆ ಮಾದರಿಯಾಗಿದೆ.ಅನೇಕ ಸಾಹಿತಿಗಳು ಇಲ್ಲಿ ವಿಭಿನ್ನವಾದ ಬರವಣಿಗೆ ಮೂಲಕ ಹೆಸರುವಾಸಿಯಾಗಿದ್ದಾರೆ ಎಂದರು.
ಬಶೀರ ಅಹ್ಮದ್ ಹೊಸಮನಿಯವರು ಅಪ್ಪಟಿ ಕನ್ನಡ ಅಭಿಮಾನಿಯಾಗಿದ್ದಾರೆ.ಉತ್ತಮ ಬರವಣಿಗೆಗಾರರು ಕೂಡ ಆಗಿದ್ದಾರೆ.ಕನ್ನಡ ಸಾಹಿತ್ಯ ಜೊತೆಗೆ ಕನ್ನಡಪರ ಹೋರಾಟವನ್ನು ಕೂಡ ಮಾಡಿದ್ದಾರೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಲ್ಲುಂಡಿ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹೊಸಮನಿ ಲಿಯಾಖತ್ ಅಲಿ ಹೊಸಮನಿ ವಹಿಸಿದ್ದರು.
ಈ ಸಂದರ್ಭದಲ್ಲಿ ದೇವೇಂದ್ರಮ್ಮ, ಯುವಕವಿ ವ್ಯಂಗ್ಯಚಿತ್ರಕಾರರು ಈರಣ್ಣ ಬೆಂಗಾಲಿ, ಬಶೀರ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.