ಅರ್ಜುಣಗಿ; ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಕಲಬುರಗಿ,ಜೂ.4-ಜಿಲ್ಲೆಯ ಅಫಜಲಪೂರ ತಾಲೂಕಿನ ಸುಕ್ಷೇತ್ರ ಅರ್ಜುಣಗಿ ಗ್ರಾಮದಲ್ಲಿ ಗ್ರಾಮ ದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವ ಬಹು ವಿಜೃಂಭಣೆಯಿಂದ ಜರುಗುವುದು.
ಜೂ.5 ರಂದು ಸಂಜೆ 5 ಗಂಟೆಗೆ ಪೂಜಾರಿಯವರ ಮನೆತನದಿಂದ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ತಾಯಿ ಚೌಡೇಶ್ವರಿ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ಅಂದೇ ಮಧ್ಯರಾತ್ರಿ 12 ಗಂಟೆಗೆ ಬೆಳ್ಳಿ ಬಾಳ ಬಟ್ಟಲು ಕಾರ್ಯಕ್ರಮ ನಡೆಯಲಿದ್ದು, ಇದು ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಜೂ.6 ರಂದು ಬೆಳಗ್ಗೆ 8 ಚೌಡೇಶ್ವರಿ ದೇವಿಯ ವೈಶಿಷ್ಟ್ಯ ರೀತಿಯಿಂದ ಕುಣಿಯುವುದು ನಂತರ ಮಧ್ಯಾಹ್ನ 12 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಕುಂಭ ಕಡಿಯುವ ಕಾರ್ಯಕ್ರಮ ನಡೆಯಲಿದೆ. ನಂತರ ಸಕಲ ಸದ್ಭಕ್ತರು ತಂಡೋಪ ತಂಡವಾಗಿ ಬಂದು ತಾಯಿ ಚೌಡೇಶ್ವರಿ ದೇವಿಗೆ ಊಡಿ ತುಂಬು ಕಾರ್ಯಕ್ರಮ ಅನಂತರ ಸಂಜೆ 5 ಗಂಟೆಗೆ ಚೀಣಿ ಕೋಲ ಕಾರ್ಯಕ್ರಮ ಜರುಗುವುದು.
ಜೂ.7. ರಂದು ನಾಡಿನ ಹೆಸರಾಂತ ಕುಸ್ತಿಪಟುಗಳಿಂದ ಕುಸ್ತಿ ಕಾರ್ಯಕ್ರಮ ನಡೆಯಲಿದ್ದು, ಕಾರಣ ಸಕಲ ಸದ್ಭಕ್ತರು ಶುಭ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತಾಯಿ ಚೌಡೇಶ್ವರಿ ದರ್ಶನ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಗ್ರಾಮದ ಸಕಲ ಸದ್ಭಕ್ತರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.