ಅರ್ಜುಣಗಿಯಲ್ಲಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಕಲಬುರಗಿ,ಮೇ.16-ಜಿಲ್ಲೆಯ ಅಫಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಮಾತಾ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುವುದು.
ಮೇ.18 ರಂದು ಗುರುವಾರ ಸಂಜೆ 5 ಗಂಟೆಗೆ ಪೂಜಾರಿ ಮನೆತನದಿಂದ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಶ್ರೀ ಚೌಡೇಶ್ವರಿ ದೇವಸ್ಥಾನದವರೆಗೆ ಪಲ್ಲಕ್ಕಿ ಮಹೋತ್ಸವ, ಅಂದೇ ಮಧ್ಯರಾತ್ರಿ 12 ಗಂಟೆಗೆ ಬೆಳ್ಳಿ ಬಾಳ ಬಟ್ಟಲು ಕಾರ್ಯಕ್ರಮ ಜರುಗುವುದು.
ಮೇ.19ರಂದು ಶುಕ್ರವಾರ ಅಮಾವಾಸ್ಯೆ ದಿವಸ ಬೆಳಗ್ಗೆ 8 ಗಂಟೆಗೆ ದೇವಿ ವಿಶೇಷ ಕಾರ್ಯಕ್ರಮ ಜರುವುದು. ನಂತರ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಜೈಕಾರದೊಂದಿಗೆ ಕುಂಭ ಕಡಿಯುವ ಕಾರ್ಯಕ್ರಮ, ನಂತರ ಮತ್ತೆ ವಿಶೇಷ ಕಾರ್ಯಕ್ರಮ ಜರುಗುವುದು. ಸಂಜೆ 6 ಗಂಟೆಗೆ ಚಿಣಿಕೋಲ ಕಾರ್ಯಕ್ರಮ ಜರುಗುವುದು.
ಮೇ.20 ರಂದು ಸಂಜೆ 4:00ಗೆ ಕುಸ್ತಿ ಪಂದ್ಯಾವಳಿ ಜರಗುವುದು. ಆದಕಾರಣ ಸದ್ಭಕ್ತರು ಈ ಪವಿತ್ರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಸಮಸ್ತ ಅರ್ಜುಣಗಿಯ ಸಕಲ ಸದ್ಭಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.