ಅರ್ಜಿಸಲ್ಲಿಸಿದ 20 ನಿಮಿಷದಲ್ಲೇ ಮಂಜೂರಿ ಆದೇಶ ಪತ್ರ ವಿತರಿಸಿದ ತಹಶೀಲ್ದಾರ್ : ಪಂಚಾಳ

ಹುಮನಾಬಾದ್:ಮಾ.1: ಪಟ್ಟಣದಲ್ಲಿ ಅರ್ಜಿ ಸಲ್ಲಿಸಿದ 20 ನಿಮಿಷದಲ್ಲೇ ಮಾಸಾಶನ ಮಂಜೂರಿ ಆದೇಶ ಪತ್ರ ವಿತರಿಸಿದೆ ಎಂದು ಗ್ರೇಡ್ 2 ತಹಶೀಲ್ದಾರ್ ಮಂಜುನಾಥ ಪಂಚಾಳ ಹೇಳಿದರು.

ಫಲನುಭಾವಿಗಳಿಗೆ ಗುರುತಿಸಿ ಕ್ಷಣ ಮಾತ್ರದಲ್ಲೇ ವಿಧವಾ ವೇತನ, ಅಂಗವಿಕಲ ವೇತನ ಮತ್ತು ವೃದ್ಯಾಪ್ಯ ವೇತನ ಪಿಂಚಣಿಗಳು ಮೊಂಜೂರಿ ಮಾಡಿಸಿ ನಿಜವಾದ ಫಲನುಭಾವಿಗಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಒದಗಿಸುತ್ತಿರುವುದರಿಂದ ಬಡಜನರು ಅನಾವಶ್ಯಕವಾಗಿ ತಹಸೀಲ್ ಕಚೇರಿಗೆ ತಿರುಗಾಡುವದು ತಪ್ಪಿಸಿದಂತಾಯಿತು. ನಿಜವಾದ ಫಲನುಭಾವಿಗಳಿಗೆ ಗುರುತಿಸಿ ಕ್ಷಣಮಾತ್ರದಲ್ಲೇ ಪಿಂಚಣಿ ಮಂಜೂರಿಸಿ ಅವರಿಗೆ ಸಿಗಬೇಕಾದ ಸೌಲಭ್ಯ ವದಗಿಸುತ್ತಿರುವದು ನನಗೆ ತುಂಬಾ ಸಂತೋಷ್ ಅನಿಸಿದೆ ಎಂದಿ ಸಂತಸ ವ್ಯಕ್ತಪಡಿಸಿದರು.