ಅರ್ಚಕ-ಪುರೋಹಿತರಿಗೆ ಆಹಾರ ಕಿಟ್ ವಿತರಣೆ

ಧಾರವಾಡ ಜೂ.8: ನಗರದ ಇಂಜಿನಿಯರ್ ಸುನೀಲ ಬಾಗೇವಾಡಿ ಹುಟ್ಟುಹಬ್ಬ ಅಂಗವಾಗಿ ವಿವಿಧ ನಗರಗಳ ದೇವಸ್ಥಾನದ ಅರ್ಚಕರು ಮತ್ತು ಪುರೋಹಿತ ವರ್ಗದವರಿಗೆ ಆಹಾರದ ಕಿಟ್ ಮತ್ತು ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ನಿತ್ಯಬಳಸುವ ದಿನಸಿಗಳನ್ನು ವಿತರಿಸಿದರು.

ಧಾರವಾಡ ರಾಣಿಚೆನ್ನಮ್ಮನಗರದ ಗಣೇಶ ದೇವಸ್ಥಾನದ ಆವರಣದಲ್ಲಿ ಕೊರೊನಾದಿಂದ ಲಾಕಡೌನ ಆದ ಕಾರಣ ಎಲ್ಲ ದೇವಸ್ಥಾನಗಳು ಬಾಗಿಲು ತೆರೆಯದಿರುವುದರಿಂದ ಅರ್ಚಕರು ಮತ್ತು ಪುರೋಹಿತರು ಸಂಕಷ್ಟದ ಸವಾಲುಗಳನ್ನು ಎದುರಿಸುವ ಕಾರಣ ಅವರಿಗೆ ನನ್ನ ಹುಟ್ಟುಹಬ್ಬಕ್ಕೆ ಆಹಾರದ ಕಿಟ್ ವಿತರಿಸಲಾಯಿತು ಎಂದು ಅಸೋಶಿಯೇಶನ್ ಅಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಲೋಕಲ್ ಸೆಂಟರ್ ಧಾರವಾಡ ಅಧ್ಯಕ್ಷರಾದ ಸುನಿಲ್ ಬಾಗೇವಾಡಿ ಹೇಳಿದರು.

ರಾಣಿ ಚೆನ್ನಮ್ಮ ನಗರ ಬಡಾವಣೆ ಅಧ್ಯಕ್ಷರಾದ ರುದ್ರಸ್ವಾಮಿ, ಸೆಂಟರ್ ನ ಪದಾಧಿಕಾರಿಗಳಾದ ಅರುಣ್ ಶೀಲವಂತ್, ಸಿದ್ದನಗೌಡ ಪಾಟೀಲ್, ವಿಜಯೇಂದ್ರಗೌಡ ಪಾಟೀಲ್, ಕಬೀರ್ ನದಾಫ್, ಜಗದೀಶ್ ಶೇಖರ್ ನಾಯಕ್, ಅಮಿತ್ ಪಾಟೀಲ್, ಶಿವಾಜಿ ಸಿಂಧೆ, ಹಾಗೂರಾಣಿ ಚೆನ್ನಮ್ಮ ನಗರ ಬಡಾವಣೆ ಮಾಜಿ ಅಧ್ಯಕ್ಷರಾದ ಪೆÇ್ರ. ಎಂ ಎಲ್ ಹಿರೇಗೌಡರ್. ಹಾಗೂ ಸಾಹಿತಿ ಮಾರ್ತಾಂಡಪ್ಪ ಎಮ್ ಕತ್ತಿ, ಪಾಲಿಕೆ ಸದಸ್ಯರಾದ ವಿಜಯಾನಂದ್ ಶೆಟ್ಟಿ ಇದ್ದರು.