ಅರ್ಚಕರ ಕುಂದು ಕೊರತೆ ನಿವಾರಣೆಗೆ ಮನವಿ

ಕೋಲಾರ,ನ.೧೮- ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ವತಿಯಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ರಾಜ್ಯದ ಮುಜರಾಯಿ ಇಲಾಖೆಯ ಅರ್ಚಕರ ಮತ್ತು ನೌಕರರ ಕುಂದು ಕೊರತೆಗಳನ್ನು ನಿವಾರಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ದಯಾನಂದ ರವರಿಗೆ ರಾಜ್ಯಾಧ್ಯಕ್ಷ ಶ್ರೀವತ್ಸ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಪರವಾಗಿ ಜಿಲ್ಲೆಯ ಮುಜರಾಯಿ ಸಿ ವರ್ಗದ ಅರ್ಚಕರಿಗೆ ದೇವಾಲಯದ ಬಳಿ ಜಾಗವಿದ್ದು ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧ್ಯಕ್ಷ ಡಾ||ವಿದ್ವಾನ್ ಕೆ.ಎಸ್. ಮಂಜುನಾಥ ದೀಕ್ಷಿತರು, ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ವಿ ಗೋಪಾಲಕೃಷ್ಣ ಮೂರ್ತಿ, ಮುಳಬಾಗಲು ತಾಲ್ಲೂಕು ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷ ಎಚ್ ಎಸ್ ಗುರುಮೂರ್ತಿ, ಕೋಲಾರ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ ವೆಂಕಟೇಶ್ ದೀಕ್ಷಿತ್, ಸಂಘಟನಾ ಕಾರ್ಯದರ್ಶಿ ಕೆ.ಸುರೇಶ್ ಹಾಜರಿದ್ದರು.