ಅರ್ಚಕರುಗಳಿಗೆ ಫುಡ್ ಕಿಟ್ ವಿತರಣೆ

ದಾವಣಗೆರೆ.ಏ.೨೮; ಕೊರೋನ ಮಹಾಮಾರಿಯ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಿಸಿರುದರಿಂದ  ಸೋಂಕನ್ನು ತಡೆಗಟ್ಟಲು ರಾಜ್ಯಸರ್ಕಾರವು ಲಾಕ್ ಡೌನ್ ಘೋಷಿಸಿರುದರಿಂದ ದಾವಣಗೆರೆ ನಗರದ ಎಲ್ಲಾ ದೇವಸ್ಥಾನಗಳ ಬಾಗಿಲು 15ದಿನಗಳಕಾಲ ಬಂದ್ ಆಗಿರುದರುತ್ತದೆ ಆದ್ದರಿಂದಇಂದು ಅಖಿಲಭಾರತ ವೀರಶೈವ ಮಾಹಸಭಾ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ   ದೇವರಮನೆ ಶಿವಕುಮಾರ್ ರವರ ನೇತೃತ್ವದಲ್ಲಿ  ನಗರದ ವಿವಿಧ  ದೇವಸ್ಥಾನಗಳ  60ಜನ ಅರ್ಚಕರುಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಿವರಾಜ್ ದೇವರಮನಿ,  ಪಾಲಿಕೆ ಸದಸ್ಯರಾದ ಶಿವನಗೌಡ ಪಾಟೀಲ. ಕರಿವಪ್ಳರ ಸಿದ್ದೇಶ್  ಜಯಪ್ರಕಾಶ್ ಮಾಗಿ,ಶ್ರೀಕಾಂತ ನೀಲಗುಂದ ಟಿಂಕರ್ ಮಂಜಣ್ಣ ಅಭಿಷೇಕ್ ಪಿ ಎಳೆಹೋಳೆ.ದೇವೇಂದ್ರಪ್ಪ .ರುದ್ರೇಶ್  ಶಿವಾನಂದ ಬೆನ್ನೂರು ಇನ್ನಿತರರು ಉಪಸ್ಥಿತರಿದ್ದರು.