ಅರ್ಚಕರಿಗೆಫುಡ್ ಕಿಟ್ ವಿತರಣೆ; ಅಸಂಘಟಿತ ವಲಯಕ್ಕೆ ಸಹಾಧನ

ಜಗಳೂರು;ಜೂ.6: ಅರ್ಚಕರಿಗೆ  ಸರ್ಕಾರ  3000 ಸಾವಿರ ಸಹಾಯಧನ ಘೋಷಿಸಿರುವುದು ಶ್ಲಾಘನೀಯ,ಅರ್ಚಕರು ಇದರ ಸದುಯೋಗಪಡೆದುಕೊಳ್ಳಬೇಕು ಎಂದು ಶಾಸಕರು ಎಸ್ ವಿ ರಾಮಚಂದ್ರ   ಕರೆ  ನೀಡಿದರು.                
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ  ತಾಲ್ಲೂಕಿನ 55 ಜನ ದೇವರ ಅರ್ಚಕರಿಗೆ ಪುಡ್ ಕಿಟ್ಗಳ ನ್ನು  ವಿತರಿಸಿ ಅರ್ಚಕರುನ್ನು ಕುರಿತು ಅವರುಮಾತನಾಡಿದರು.ಲಾಕ್ ಡೌನ್ ನಿಂದ ದೇವಸ್ಥಾನ ಗಳಲ್ಲಿ ಸೇವೆ ಸಲ್ಲಿಸುವ ಅರ್ಚಕರ ಕುಟುಂಬದ ಜೀವನ ಸ್ಥಿತಿ  ಕಷ್ಟಕರವಾಗಿದೆ. ಮುಖ್ಯ ಮಂತ್ರಿ ಯಡಿಯೊರಪ್ಪನವರು   3000 ಸಾವಿರ ಸಹಾಯ ಧನನೀಡಿದ್ದಾರೆ ಎಂದರು.ಅಸಂಘಟಿತ ವಿವಿಧ ಕ್ಷೇತ್ರದ ಸೇವೆ ಸಲ್ಲಿಸುವಂತಹ ಕುಟುಂಬಗಳನ್ನು ಪರಿಗಣಿಸಿ ನೆರವುನೀಡಲಾಗಿದೆ. ಸರ್ಕಾರ ತಮ್ಮ ಖಾತೆಗಳಿಗೆ ನೇರವಾಗಿ ಹಣ ಹಾಕಲಿದ್ದು ತಾವುಗಳು ತಪ್ಪದೆ ಸೇವಾ ಸಿಂದು ಮೂಲಕ ಅರ್ಜಿ ಹಾಕಿ ಸೌಲಭ್ಯ ಪಡೆಯುವಂತೆ ತಿಳಿಸಿದರು.  ಈ ಸಂದರ್ಭದಲ್ಲಿ ಪ್ರಭಾರ ತಹಶೀಲ್ದಾರ್ ಗೀರಿಶ್ ಬಾಬು.ಸಹಾಯಕ ನೊಡಲ್ ಅಧಿಕಾರಿ ಮಹೇಶ್. ಆರ್ ಐ ಕುಬೇರನಾಯ್ಕ್. ಸೇರಿದಂತೆ ವಿವಿಧ ದೇವಾಸ್ಥಾನಗಳ ಅರ್ಚಕರು ಹಾಜುರಿದ್ದರು.