ಅರೋಲಿ: ವಿಶ್ವ ಪರಿಸರ ದಿನಾಚರಣೆ

ರಾಯಚೂರು,ಜೂ.೫- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಪ್ರೇಮಿ ಸುಂದರ್ ಲಾಲ್ ಬಹುಗುಣ ಅವರ ಸ್ಮರಣಾರ್ಥವಾಗಿ ಗ್ರಾಮದ ಯುವಕರು ಶಾಲೆ ಸುತ್ತಲು ಮತ್ತು ರಸ್ತೆ ಬದಿ, ದೇವಾಸ್ಥಾನದ ಆವರಣದಲ್ಲಿ ಗ್ರಾಮದ ಒಂದನೇ ವಾರ್ಡ್ ಯುವಕರಿಂದ ಸುಮಾರು ೯೦ಕ್ಕೂ ಹೆಚ್ಚು ನಾನಾ ತಳಿಯ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ, ಚನ್ನಬಸವ,ಗುಂಡು, ಗಂಗಪ್ಪ,ಹನುಮಂತ,ಬಸವರಾಜ,ರಾಜು ಪಾಟೀಲ್,ಈಶ್ವರ್ ಪಾಟೀಲ್,ಸರಾಫ್ ಶರಣು,ವಿಜಯ್ ಬಿಲ್ಡರ್,ಯಲ್ಲಪ್ಪ ಸೇರಿದಂತೆ ಗ್ರಾಮದ ಚಿಕ್ಕ ಮಕ್ಕಳು ಪಾಲ್ಗೊಂಡಿದ್ದರು.