ಅರೋಲಿ:ಚರಂಡಿ,ಕಸದ ಸ್ಥಳ ಸ್ವಚ್ಛತೆಗೆ ಆಗ್ರಹ

ರಾಯಚೂರು,ನ.೧೫- ಅರೋಲಿ ಗ್ರಾಮದಲ್ಲಿ ಚರಂಡಿ ಮತ್ತು ಕಸವನ್ನು ಸ್ವಚ್ಛತೆ ಮಾಡಬೇಕು ಎಂದು ಒತ್ತಾಯಿಸಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯುವಕ ಸಂಘದ ಮುಖಂಡರು ಅರೋಲಿ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು
ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಚತೆಗೊಳಿಸುತಿಲ್ಲ. ಮತ್ತು ಕೆಲವು ಕಡೆ ಸಾರ್ವಜನಿಕ ಕಸದ ತೊಟ್ಟಿಗಳನ್ನು ನಿರ್ಮಿಸದೇ,ಇರುವುದರಿಂದ ಗ್ರಾಮಸ್ಥರು ಕಸವನ್ನು ಎಲ್ಲಿಬೇಕೆಂದು ಅಲ್ಲಿ ಹಾಕುವುದರಿಂದ ಗ್ರಾಮದ ಜನರಿಗೆ ಡೆಂಗ್ಯೂ ಮತ್ತು ಮಲೇರಿಯಾ ಇತ್ಯಾಧಿ ಅನೇಕ ರೋಗಗಳು ಬರುತ್ತಿದ್ದು,ಇದರಿಂದ ಗ್ರಾಮಸ್ತರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.ಅದ್ದರಿಂದ ಗ್ರಾಮದಲ್ಲಿ ಚರಂಡಿಗಳನ್ನು ಮತ್ತು ಸಾರ್ವಜನಿಕ ಕಸದ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.
ಆದಿಲಿಂಗೇಶ್ವರ ಗುಡಿಯಿಂದ ಕೆರೆಯವರೆಗೆ ಚರಂಡಿಸ್ವಚ್ಚತೆಗೊಳಿಸಿ.ಗಿಳಿರಾಮನ ಮನೆಯಿಂದ ಕೆರೆಯವರೆಗೆ ಚರಂಡಿಸ್ವಚ್ಚತೆಗೊಳಿಸಬೇಕು.ವೆಂಕನಗೌಡನ ಮನೆಯಿಂದ ಕುರುಡಿ ಮುಖ್ಯರಸ್ತೆಯವರೆಗೆ ಚರಂಡಿ ಸ್ವಚ್ಚತೆಗೊಳಿಸಬೇಕು. ದೊ.ನಾಗಪ್ಪನ ಮನೆಯಿಂದ ಪಂಚಾಯಿತ ಹತ್ತಿರದಲ್ಲಿರುವ ಮಹಿಳಾ ಸಾರ್ವಜನಿಕ ಶೌಚಾಲಯದವರೆಗೆ ಚರಂಡಿ ಸ್ವಚ್ಚತೆಗೊಳಿಸಿ.ನಾಗಲೀಕರ್ಯವರ ಮನೆಯಿಂದ ಪಂಚಾಯಿತ ಹತ್ತಿರದಲ್ಲಿರುವ ಮಹಿಳಾ ಸಾರ್ವಜನಿಕ ಶೌಚಾಲಯದವರೆಗೆ ಹಾಗೂ ವಾಲ್ಮೀಕಿ ನಗರ ಮತ್ತು ಚೌಡಮ್ಮನ ಏರಿಯಾದಲ್ಲಿರುವ ಎಲ್ಲಾ ಚರಂಡಿಗಳನ್ನು ಸ್ವಚ್ಚತೆಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ವಿನೋದ್ ನಾಯಕ್,ವೀರೇಶ್,ಲಂಕೇಶ್,ಸೇರಿದಂತೆ ಇತರರು ಉಪಸ್ಥಿತರಿದ್ದರು.