ಅರೆಭಾಷೆ ವಿಶ್ವಕೋಶ ತಯಾರಿ ಕಾರ್ಯಾಗಾರ

ಸುಳ್ಯ,ಡಿ.೨೨-ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ ವಿಶ್ವಕೋಶ ತಯಾರಿ ಕಾರ್ಯಾಗಾರವನ್ನು ಸುಳ್ಯದ ಸಂಯುಕ್ತ ಯುವಜನ ಮಂಡಳಿ ಸಭಾಂಗಣದಲ್ಲಿ ನಡೆಯಿತು.
ಕನ್ನಡ ವಿಷಯ ವಿಶ್ವಕೋಶದ ತಯಾರಿಯಲ್ಲಿ ೩೮ ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಹಾ.ತಿ. ಕೃಷ್ಣೇಗೌಡ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅರೆಭಾಷೆ ವಿಶ್ವಕೋಶ ತಯಾರಿಯ ಸ್ವರೂಪ ಮತ್ತು ರಚನೆ ಸಾಧ್ಯತೆ ಕುರಿತಂತೆ ಮಾತನಾಡಿ ಅರೆಭಾಷೆ ವಿಶ್ವಕೋಶವು ಭಾಷೆ ಮತ್ತು ಪ್ರದೇಶದ ಅಸ್ಮಿತೆ, ವಿಶ್ವಕೋಶದ ರಚನೆಯಿಂದ ಒಂದು ಭಾಷೆಯ ಸಂಸ್ಕೃತಿ, ಪ್ರಕೃತಿ, ಬದುಕು ಇತ್ಯಾದಿಗಳನ್ನು ದಾಖಲಿಸಿ ಮುಂದಿನ ಜನಾಂಗಕ್ಕೆ ಮಾಹಿತಿಯನ್ನು ನೀಡುವ ಮೈಲಿಗಲ್ಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅರೆಭಾಷೆ ಅಕಾಡೆಮಿಯ ಹಲವು ಯೋಜನೆಗಳಲ್ಲಿ ವಿಶ್ವಕೋಶ ರಚನೆಯು ಒಂದಾಗಿದ್ದು ಅರೆಭಾಷೆ ನಿಘಂಟು, ಅರೆಭಾಷೆ ಐ.ಎಸ್.ಓ. ಕೋಡ್ ಇತ್ಯಾದಿಗಳ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ, ಅರೆಭಾಷೆ ಸಮುದಾಯ ಮತ್ತು ಪರಿಸರದವರು ಅಕಾಡೆಮಿಯೊಂದಿಗೆ ಕೈಜೋಡಿಸ ಬೇಕೆಂದು ಮನವಿ ಮಾಡಿದರು.
ಸುಳ್ಯ ಭಾಗದ ಅರೆಭಾಷೆ ಬರಹಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.ಅಕಾಡೆಮಿ ಸದಸ್ಯರಾದ ಕುಸುಮಾಧರ ಎ.ಟಿ., ಜಯಪ್ರಕಾಶ್ ಮೋಂಟಡ್ಕ, ಸ್ಮಿತಾ ಅಮೃತರಾಜ್ ಮತ್ತು ಪುರುಷೋತ್ತಮ ಕಿರ್ಲಾಯ ಉಪಸ್ಥಿತರಿದ್ದರು. ಅರೆಭಾಷೆ ವಿಶ್ವಕೋಶ ತಯಾರಿಯ ಸಂಚಾಲಕರಾದ ಡಾ.ಪುರುಷೋತ್ತಮ ಕೆ.ವಿ ಕರಂಗಲ್ಲು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಭರತೇಶ ಅಲಸಂಡೆಮಜಲು ವಂದಿಸಿದರು. ಡಾ. ವಿಶ್ವನಾಥ ಬದಿಕಾನ ಕಾರ್ಯಕ್ರಮ ನಿರೂಪಿಸಿದರು.