ಅರುಣೋದಯ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಬೀದರ್:ನ.15: ಪಾಲಕರಾದವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ನೆಪವೊಡ್ಡಿ ಹಾಸ್ಟೆಲ್‍ಗೆ ಕಳುಹಿಸಿದರೆ ಮುಂದೊಂದು ದಿನ ಮಕ್ಕಳು ನಮಗೆ ವೃದ್ದಾಶ್ರಮಕ್ಕೆ ಕಳುಹಿಸುವುದರಲ್ಲಿ ಸಂದೇಹವೆಲ್ಲವೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ತಿಳಿಸಿದರು.

ಸೋಮವಾರ ನಗರದ ಬಸವನಗರ ಬಡಾವಣೆಯಲ್ಲಿರುವ ಅರುಣೋದಯ ಪ್ರೌಢಶಾಲೆಯಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರೈಸಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮನಸ್ಸು ಹೂವಿನಂತಿರುತ್ತದೆ. ಅದನ್ನರಿತು ಮಕ್ಕಳಿಗೆ ಪಾಲಕರಾದ ನಾವು ಒಳ್ಳೆಯ ಸಂಸ್ಕಾರ ಹಾಗೂ ಸಂಸ್ಕøತಿ ಕಲಿಸಿದರೆ ಭವಿಷ್ಯದಲ್ಲಿ ನಮ್ಮನ್ನು ಚೆನ್ನಾಗಿ ಆರೈಕೆ ಮಾಡಿ, ನಮ್ಮ ಋಣ ತೀರಿಸುವರು. ಆದರೆ ನಾವಿಂದು ನಮ್ಮ ಮಕ್ಕಳು ಹೆಚ್ಚಿನ ಅಂಕ ಗಳಿಸಿ ಉತ್ತಮ ಹುದ್ದೆಯನ್ನೇರಲಿ ಎಂದು ಮೆಟ್ರೊ ಸೀಟಿಗಳಿಗೆ ಕಳುಹಿಸುತ್ತಿದ್ದೇವೆ. ಆದರೆ ಅದರಲ್ಲಿ ಕೆಲವರು ದುಷ್ಚಟಗಳಿಗೆ ದಾಸ್ಯರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದರೆ ಇನ್ನು ಕೆಲವರು ಪರಿಕ್ಷೆಯಲ್ಲಿ ಅನುತ್ತಿರ್ಣರಾಗುತ್ತಿರುವರು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಸಾಧನೆ ಮಾಡುತ್ತಿರುವರು. ಇದನ್ನು ಮನಗಂಡು ಪಾಲಕರು ತಮ್ಮ ಮಕ್ಕಳಿಗೆ ತಮ್ಮ ಬಳಿ ಇರಿಸಿಕೊಂಡರೆ ಹೆಚ್ಚಿನ ಅಂಕ ಗಳಿಸಬಹುದೆಂಬುದಕ್ಕೆ ಅನೇಕ ನಿದರ್ಶನಗಳಿವೆ ಎಂದು ಹೇಳಿ ತಮ್ಮ ಮಗನ ಸಾಧನೆ ಮೆಲುಕು ಹಾಕಿದರು.

ಅಧ್ಯಕ್ಷತೆ ವಹಿಸಿದ ಅಲ್ಲಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ ಮುಗ್ಟಾಪುರೆ ಮಾತನಾಡಿ, ವಿದ್ಯಾರ್ಥಿಗಳು ಖಾಲಿ ಕೊಡಗಳಿದ್ದ ಹಾಗೆ, ಅಖಂಡ ಕಲ್ಲಿನಂತೆ. ಉತ್ತಮ ಜ್ಞಾನ ಹಾಗೂ ಸಂಸ್ಕಾರದಿಂದ ಅವನ್ನು ಭರಿಸಿದಲ್ಲಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಸತ್ಯವಾಗುತ್ತದೆ. ಹಾಗೇ ಒಳ್ಳೆಯ ಮೂರ್ತಿ ನಿರ್ಮಾಣಕ್ಕೂ ಅದರಿಂದ ಸಾದ್ಯವಿದೆ. ಹೀಗಾಗಿ ಜನ್ಮ ನೀಡಿದ ಪಾಲಕರು, ಶಿಕ್ಷಣ ನೀಡುವ ಶಿಕ್ಷಕರ ಜವಾಬ್ದಾರಿ ಈ ದೇಶದ ಭವಿಷ್ಯ ನಿರ್ಮಿಸುವಲ್ಲಿ ಅಡಗಿದೆ ಎಂದರು. ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ ಪ್ರಾಸ್ತಾವಿಕ ಮಾತನಾಡಿದರು. ಸಮಾಜ ಕಾರ್ಯಕರ್ತ ನಾಗರಾಜ ಹುಲಸೂರೆ ಹಾಗೂ ಸ್ಥಳಿಯ ಪ್ರೌಢಶಾಲೆ ಮುಖ್ಯ ಗುರು ಈಶ್ವರಿ ಬೇಲೂರೆ ವೇದಿಕೆಯಲ್ಲಿದ್ದರು.

ಇದಕ್ಕೂ ಮೊದಲು ಮಾಜಿ ಪ್ರಧಾನಿ ದಿ.ಪಂಡಿತ ಜವಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಅಲ್ಲಿಯ ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಕ್ಕಳಿಗೆ ಕಾಣಿಕೆ ನೀಡಿ ಪುರಸ್ಕರಿಸಲಾಯಿತು.

ಆರಂಭದಲ್ಲಿ ಅಲ್ಲಿಯ ವಿದ್ಯಾರ್ಥಿನಿಯರಾದ ಕು.ದೀಪಾಲಿ ಹಾಗೂ ಕು.ರಾಧಿಕಾ ಸ್ವಾಗತ ಗೀತೆ ಹಾಡಿದರು. ಶಿಕ್ಷಕಿ ಪಾರ್ವತಿ ಬಿರಾದಾರ ಸ್ವಾಗತಿಸಿದರು. ಸಪ್ನಾರಾಣಿ ಪಾಟೀಲ ಕಾರ್ಯಕ್ರಮ ನಿರೂಪಿಸಿ, ಸುವರ್ಣಾ ಪಾಟೀಲ ವಂದಿಸಿದರು. ಸ್ಥಲಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.