ಅರುಣೋದಯ ಶಾಲೆಯಲ್ಲಿ ಡೆಂಗಿ ಜಾಗೃತಿ ಕಾರ್ಯಕ್ರಮ

ಬೀದರ್: ಜು.28:ನೈರ್ಮಲ್ಯದಿಂದ ಮಾತ್ರ ಬಹುತೇಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ ಮಂಗಳೂರೆ ಹೇಳಿದರು.
ಡೆಂಗಿ ವಿರೋಧಿ ಮಾಸಾಚರಣೆ ಪ್ರಯುಕ್ತ ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಡೆಂಗಿ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ಡೆಂಗಿ ಜ್ವರ ಸೇರಿ ಅನೇಕ ರೋಗಗಳ ಹರಡುವಿಕೆಗೆ ಅಸ್ವಚ್ಛತೆಯೇ ಕಾರಣ ಎಂದರು.
ಅಪಾಯಕಾರಿ ಡೆಂಗಿ ಜ್ವರದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಡೆಂಗಿಗೆ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿ ತಡೆಯಲು ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಆರೋಗ್ಯ ಇಲಾಖೆಯ ಕಾವೇರಿ ಮಾತನಾಡಿ, ಈಡಿಸ್ ಜಾತಿಯ ಸೊಳ್ಳೆ ಕಡಿತದಿಂದ ಡೆಂಗಿ ಜ್ವರ ಬರುತ್ತದೆ. ಶುದ್ಧ ನೀರು ಹಾಗೂ ನೀರು ಸಂಗ್ರಹಿಸುವ ಸಲಕರಣಗಳಲ್ಲೇ ಈ ಸೊಳ್ಳೆ ಸಂತಾನಾಭಿವೃದ್ಧಿ ಮಾಡುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ ಮಾತನಾಡಿ, ಡೆಂಗಿ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು ಎಂದು ಹೇಳಿದರು.
ಶಿಕ್ಷಕರಾದ
ಶಿಕ್ಷಕರಾದ ಪುರುಷೋತ್ತಮ ಮಹೇಂದ್ರ, ಮಾರುತೆಪ್ಪ ಗುನ್ನಳ್ಳಿ, ಸುವರ್ಣ ಪಾಟೀಲ, ಸಾರಿಕಾ ಬಿರಾದಾರ, ಸಪ್ನಾರಾಣಿ ಪಾಟೀಲ, ಪೂಜಾ ಕಡ್ಡೆ, ಸುನಿತಾ ಕಾಜಿ, ಚಂದ್ರಕಲಾ ಸ್ವಾಮಿ, ಸುಧಾ ಉಪ್ಪೆ, ರೇಖಾ ಪಾಟೀಲ, ಪಾರ್ವತಿ, ಪೂಜಾರಾಣಿ, ಶೈಲಜಾ ಸ್ವಾಮಿ ಇದ್ದರು.
ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ಸ್ವಾಗತಿಸಿದರು. ನೀಲಮ್ಮ ಗಜಲೆ ನಿರೂಪಿಸಿದರು. ಮೇಘಾ ಕಾಜಿ ವಂದಿಸಿದರು.