ಅರುಣಾಚಲ‌ ಪ್ರದೇಶಕಕ್ಕೆ ಅಮಿತ್ ಶಾ ಭೇಟಿ: ಚೀನಾ ತಗಾದೆ

ಮುಂಬೈ, ಏ.10-: ವಿಶ್ವವಿದ್ಯಾನಿಲಯದ ಪದವಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ದಾಳಿಗೆ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಶೈಕ್ಷಣಿಕ ಪದವಿ ರಾಜಕೀಯ ವಿಷವಾಗಬೇಕೇ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಯಾರೊಬ್ಬರದು ಶೈಕ್ಷಣಿಕ ಪದವಿ ರಾಜಕೀಯ ವಿಷಯವಾಗಬಾರದು , ಪ್ರಶ್ನೆ ಮಾಡಲು ಸಾಕಷ್ಟು ವಿಷಯಗಳಿವೆ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಪ್ರಶ್ನಿಸಿ ಗುಜರಾತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿತ್ತು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, ಅವರು ದೇಶ ನಿರುದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಹಣದುಬ್ಬರದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ ಅದರ ಬಗ್ಗೆ ಚರ್ಚೆ ನಡೆಸಲಿ ಎಂದಿದ್ದಾರೆ.

“ನಾವು ನಿರುದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಹಣದುಬ್ಬರವನ್ನು ಎದುರಿಸುತ್ತಿರುವಾಗ ದೇಶದಲ್ಲಿ ಯಾರೊಬ್ಬರ ಶೈಕ್ಷಣಿಕ ಪದವಿ ರಾಜಕೀಯ ವಿಷಯವಾಗಬೇಕೇ ಎಂದು ವಿರೋದ ಪಕ್ಷಗಳ ರಾಜಕೀಯ ನಾಯಕರನ್ನು ಅವರು ಪ್ರಶ್ನಿಸಿದ್ದಾರೆ.