ಅರುಣಾಚಲದಲ್ಲಿ ವರುಣ್ ಧವನ್ ’ಭೇಡಿಯಾ’ ಫಿಲ್ಮ್ ನ ಚಿತ್ರೀಕರಣ: ಬೆಂಕಿ ಅವಘಡದ ಸಂತ್ರಸ್ತರಿಗೆ ವರುಣ್ ನೆರವು

ಬಾಲಿವುಡ್ ನಟ ವರುಣ್ ಧವನ್ ಈ ದಿನಗಳಲ್ಲಿ ಅರುಣಾಚಲಪ್ರದೇಶ ರಾಜ್ಯದಲ್ಲಿದ್ದಾರೆ.ಅವರು ತಮ್ಮ ಅಪ್ ಕಮಿಂಗ್ ಫಿಲ್ಮ್ ’ಭೇಡಿಯಾ’ ಚಿತ್ರೀಕರಣದ ಪ್ರಯುಕ್ತ ಅಲ್ಲಿ ಪ್ರವಾಸದಲ್ಲಿದ್ದಾರೆ. ವರುಣ್ ತನ್ನ ಪತ್ನಿ ನತಾಶಾ ದಲಾಲ್ ಜೊತೆಗೂಡಿ ಅರುಣಾಚಲ ಪ್ರದೇಶದ ಒಂದು ಹಳ್ಳಿಯಲ್ಲಿ ಬೆಂಕಿಅವಘಡದ ಕಾರಣ ನಷ್ಟ ಅನುಭವಿಸಿದ ಊರಿನ ಜನರಿಗೆ ನೆರವು ನೀಡಿದ್ದಾರೆ.


ಅರುಣಾಚಲದ ತಿರ್ಪ ಜಿಲ್ಲೆಯ ಲೊಂಗಲಿಆಂಗ್ ಊರಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು ಇದರಲ್ಲಿ ಐದು ವರ್ಷದ ಮಗು ಕೂಡಾ ಇತ್ತು.ಇದಲ್ಲದೆ ಊರಿನ ೧೪೩ ಮನೆಗಳು ಬೆಂಕಿಯಿಂದ ನಷ್ಟ ಅನುಭವಿಸಿತ್ತು
ವರುಣ್ ಮತ್ತು ನತಾಶಾ ದಲಾಲ್ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಇವರಿಬ್ಬರು ಲೋಅರ್ ಸುಬಂಸಿರಿಯ ಉಪಾಯುಕ್ತರಾದ ಸೋಮಚಾ ಲೋವಾಂಗ್ ಅವರ ಮೂಲಕ ಆರ್ಥಿಕ ನೆರವು ನೀಡಿದ್ದಾರೆ.ಹಾರರ್ ತ್ರಿಲ್ಲರ್ ಫಿಲ್ಮ್ ’ಭೇಡಿಯಾ’ ಈ ಫಿಲ್ಮ್ ನಲ್ಲಿ ಕೃತಿಸೇನನ್ ಕೂಡ ಪ್ರಧಾನ ಪಾತ್ರದಲ್ಲಿದ್ದಾರೆ. ಈ ಫಿಲ್ಮ್ ಮುಂದಿನ ವರ್ಷ ಏಪ್ರಿಲ್ ೧೪ರಂದು ರಿಲೀಸ್ ಆಗಲಿದೆ.

’ಮಿಶನ್ ಮಜ್ನೂ’ ಶೂಟಿಂಗ್ ಸಮಯ ಸಿದ್ಧಾರ್ಥ್ ಮಲ್ಹೋತ್ರಾ ಗಾಯ

ಸಿದ್ದಾರ್ಥ್ ಮಲ್ಹೋತ್ರಾ ಅವರು ಈ ದಿನಗಳಲ್ಲಿ ತನ್ನ ಅಪ್ ಕಮಿಂಗ್ ಫಿಲ್ಮ್ ಮಿಷನ್ ಮಜ್ನೂ ಶೂಟಿಂಗ್ ಪ್ರಯುಕ್ತ ಲಕ್ನೋದಲ್ಲಿ ಇದ್ದಾರೆ. ಇತ್ತೀಚೆಗೆ ಒಂದು ಸ್ಟಂಟ್ ದೃಶ್ಯದ ಚಿತ್ರೀಕರಣದ ಸಮಯ ಸಿದ್ಧಾರ್ಥ ಅವರಿಗೆ ಕಾಲಿಗೆ ಒಂದಿಷ್ಟು ಪೆಟ್ಟು ಬಿದ್ದಿತ್ತು.


ಸಿದ್ದಾರ್ಥ್ ಅವರು ಡೈರೆಕ್ಟರ್ ಶಾಂತನು ಬಾಗಚೀ ಮತ್ತು ಆಕ್ಷನ್ ಡೈರೆಕ್ಟರ್ ರವಿ ವರ್ಮಾ ಅವರ ಮೇಲ್ವಿಚಾರಣೆಯಲ್ಲಿ ಸ್ಟಂಟ್ ದೃಶ್ಯದ ಶೂಟಿಂಗ್ ಮಾಡುತ್ತಿದ್ದರು. ಆಕ್ಷನ್ ದೃಶ್ಯದಲ್ಲಿ ಅವರ ಮೊಣಗಂಟು ಒಂದು ಲೋಹದ ತುಂಡಿಗೆ ತಾಗಿತ್ತು ಹಾಗೂ ಮೊಣಗಂಟು ತೀವ್ರ ನೋವು ಶುರುವಾಯಿತು.

ಶುಶ್ರೂಷೆ ನಂತರವೇ ಅವರು ಆ ದೃಶ್ಯದ ಶೂಟಿಂಗ್ ಪೂರ್ಣಗೊಳಿಸಿದರು.ಯಾಕೆಂದರೆ ಫಿಲ್ಮ್ ಶೂಟಿಂಗ್ ನಿರ್ಧಾರಿತ ಸಮಯದಲ್ಲೇ ಪೂರ್ಣಗೊಳಿಸುವುದಕ್ಕಾಗಿ ಅವರು ಹೆಚ್ಚಿನ ಸಮಯ ವ್ಯರ್ಥ ಮಾಡಲಿಲ್ಲವಂತೆ.ಈ ಫಿಲ್ಮ್ ನ ನಾಯಕಿ ರಶ್ಮಿಕಾ ಮಂದಣ್ಣ.

ಕೊರೊನಾದಿಂದ ಗುಣಮುಖರಾದ ನಂತರ ಕಾರ್ತಿಕ್ ಆರ್ಯನ್ ೪.೫ ಕೋಟಿ ರೂಪಾಯಿ ಮೌಲ್ಯದ ಕಾರು ಖರೀದಿಸಿದರು.

ನಟ ಕಾರ್ತಿಕ್ ಆರ್ಯನ್ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿದ್ದರು . ಕೊರೊನಾದಿಂದ ಗುಣಮುಖರಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಗುಣಮುಖರಾದ ನಂತರ ಕಾರ್ತಿಕ್ ತನ್ನದೇ ಆದ ಸ್ವಂತ ಲೆಂಬೋರ್ಗಿನೀ ಉರೂಸ್ ಕಾರು ಖರೀದಿಸಿದ್ದಾರೆ ಇದನ್ನು ಕೂಡಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.


ಅವರು ಈ ಬಗ್ಗೆ ಒಂದು ವಿಡಿಯೋವನ್ನು ಶೇರ್ ಮಾಡುತ್ತಾ ಕ್ಯಾಪ್ಷನ್ ಸಹ ಬರೆದಿದ್ದಾರೆ.
ಇದು ಕಪ್ಪು ಬಣ್ಣದ ಲೆಂಬೋರ್ಗಿನೀ ಉರೂಸ್ ಕಾರು.ಇದರ ಬೆಲೆ ೪.೫ ಕೋಟಿ ರೂಪಾಯಿ ಎಂದು.


ಕಾರ್ತಿಕ್ ಶೀಘ್ರವೇ ತನ್ನ ಅಪ್ ಕಮಿಂಗ್ ಫಿಲ್ಮ್ ’ಭೂಲ್ ಭುಲೈಯಾ ೨’ ರ ಶೂಟಿಂಗ್ ಮತ್ತೆ ಆರಂಭಿಸಲಿದ್ದಾರೆ.