ಅರುಣಕುಮಾರ್ ಪಾಟೀಲ್ ಬೆಂಬಲಿಗರು ನಿತಿನ್ ಗುತ್ತೇದಾರ್ ನೇತೃತ್ವದಲ್ಲಿ ಬಿಜೆಪಿ ತೆಕ್ಕೆಗೆ

ಅಫಜಲಪುರ :ಜ.14: ತಾಲ್ಲೂಕಿನ ಶಿರವಾಳ್ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಅರುಣಕುಮಾರ್ ಎಂ.ವೈ. ಪಾಟೀಲ್ ಅವರ ಕಟ್ಟಾ ಬೆಂಬಲಿಗರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದರು.
ಗ್ರಾಮದ ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾದ ಸಂಗಮೇಶ್ ಅಂಜುಟಗಿ, ಗೋಪಾಲ್ ನಿಂಬಾಳಕರ್, ಗ್ರಾಮ ಪಂಚಾಯಿತಿ ಸದಸ್ಯ ಹಣಮಂತ್ ಲಸ್ಕರ್, ಸಂಗಪ್ಪ ಇಬ್ರಾಹಿಂಪೂರ್, ಪ್ರಕಾಶ್ ಲಾಳಸಂಗಿ, ಸಿದ್ದು ಮಾವೂರ್, ಬಾಲಪ್ಪ ಲಸ್ಕರ್, ರುದ್ರಯ್ಯಸ್ವಾಮಿ, ಶಂಕರ್ ನಾಗೂರ್, ಬಸು ಲಾಳಸಂಗಿ, ಸೋಹೆಲ್ ಧಪೇದಾರ್, ಮಂಜು ಕಾಂಬಳೆ ಮುಂತಾದವರು ಬಿಜೆಪಿಯನ್ನು ಸೇರಿದ ಪ್ರಮುಖರು.
ಈ ಸಂದರ್ಭದಲ್ಲಿ ಸಂಗಮೇಶ್ ಅಂಜುಟಗಿ ಅವರು ಮಾತನಾಡಿ, ಅರುಣಕುಮಾರ್ ಎಂ.ವೈ. ಪಾಟೀಲ್ ಅವರು ಒಬ್ಬರಿಗೆ ಮಾತ್ರ ಪೆÇ್ರೀತ್ಸಾಹ ನೀಡಿ, ಉಳಿದವರಿಗೆ ನಿರ್ಲಕ್ಷಿಸುತ್ತಾರೆ. ತಮಗೆ ಬೇಕಾದವರಿಗೆ ಕೆಲಸ ಕಾರ್ಯಗಳನ್ನು ಕೊಡುತ್ತ ಅವರಿಗೆ ಮಣೆ ಹಾಕುತ್ತಾರೆ. ಬಹು ವರ್ಷಗಳಿಂದ ನಾವು ಶಾಸಕ ಎಂ.ವೈ. ಪಾಟೀಲ್ ಅವರ ಕುಟುಂಬಕ್ಕೆ ನಿಷ್ಠರಾಗಿ ಕಾರ್ಯನಿರ್ವಹಿಸಿದ್ದೆವು. ಅವರ ಪುತ್ರ ಅರುಣಕುಮಾರ್ ಎಂ.ವೈ. ಪಾಟೀಲ್ ಅವರು ನಮಗೆ ಕಡೆಗಣಿಸಿದ್ದರಿಂದ ಬೇಸತ್ತು ನಿತಿನ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾಗಿ ತಿಳಿಸಿದರು.
ಅದೇ ರೀತಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಮಾತನಾಡಿ, ಬೂತ್ ವಿಜಯ್ ಅಭಿಯಾನ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು, ಶಿರವಾಳ್ ಗ್ರಾಮದಲ್ಲಿ ಅನೇಕರು ಬಿಜೆಪಿ ಸೇರಿದ್ದಾರೆ. ನನ್ನ ನಾಯಕತ್ವದ ಮೇಲೆ ನಿಷ್ಠೆ ಹೊಂದಿ ಇನ್ನೂ ಅನೇಕರು ವಿವಿಧ ಪಕ್ಷಗಳನ್ನು ತೊರೆದು ಕಮಲ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್ ರೇವೂರ್, ಮುಖಂಡರಾದ ಅರುಣ್ ಅಂಜುಟಗಿ, ಶ್ರೀಮಂತ್ ಅಂಜುಟಗಿ, ಸಂತೋಷ್ ಬಾಂಬೆ, ದಾನೂ ಪಟಾಟೆ, ಜ್ಯೋತಿಪ್ರಕಾಶ್ ಪಾಟೀಲ್, ಸಚಿನ್ ರಾಠೋಡ್, ಸೂಗಯ್ಯ ಹಿರೇಮಠ್, ವೀರೇಶ್ ಖೇಳಗಿ, ಸಿದ್ದು ರಾಣೆ, ಮಲ್ಲು ದೇವತ್ಕಲ್, ಪ್ರಕಾಶ್ ಬನ್ನಟ್ಟಿ ಮುಂತಾದವರು ಉಪಸ್ಥಿತರಿದ್ದರು.