ಅರಿಶಿನ ಹಾಲಿನ ಉಪಯೋಗಗಳು

ಅರಿಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ ಇದು ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು, ಶೀತಕ್ಕೆ ತ್ವರಿತ ಪರಿಹಾರವನ್ನು ನೀಡುತ್ತದೆ.
ಮೂಳೆಗಳ ದೃಢತೆಗೆ ಅರಿಶಿನ ಹಾಲು ಸಹಕಾರಿಯಾಗುತ್ತದೆ. ಇದು ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಹಾಲು ಸಹಾಯ ಮಾಡುತ್ತದೆ.
ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ದೇಹವನ್ನು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಅರಿಶಿನ ಹಾಲನ್ನು ಸೇವಿಸುವುದರಿಂದ ಉಸಿರಾಟ ಸಂಬಂಧಿ ತೊಂದರೆಗಳು ಮತ್ತು ಸೈನಸ್ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಅರಿಶಿನ ಹಾಲು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಗುದನಾಳದ ಕ್ಯಾನ್ಸರ್‌ನಂತಹ ಬೆಳವಣಿಗೆಗಳನ್ನು ತಡೆಯುತ್ತದೆ. ಅರಿಶಿನ ಹಾಲು ಅಮೈನೊ ಆಮ್ಲ, ಟ್ರಿಪ್ಟೋಫಾನ್‌ನ್ನು ಉತ್ಪಾದಿಸುವುದರಿಂದ ಇದನ್ನು ಮಲಗುವ ಮುಂಚೆ ಸೇವಿಸುವುದರಿಂದ ಶಾಂತಿಯುತ ಮತ್ತು ಸುಖವಾದ ನಿದ್ರೆಗೆ ಕಾರಣವಾಗುತ್ತದೆ.
ಅರಿಶಿನ ಹಾಲು ಪಿತ್ತರಸದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೇ ಅಮ್ಲದ ಹಿಮ್ಮುಖ ಹರಿವು, ಹೊಟ್ಟೆಯುಬ್ಬರವನ್ನು ತಡೆಯುತ್ತದೆ.
ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆಯ ನಿವಾರಣೆಗೆ ಅರಿಶಿನದ ಹಾಲು ಉಪಯುಕ್ತ.
ಶ್ವಾಸನಾಳದಲ್ಲಿ ಕಫ ಶೇಖರಣೆಯಾಗುವುದನ್ನು ತಡೆಯುವ ಅರಿಶಿನ ಹಾಲು ಕಿರಿಕಿರಿ ಉಂಟು ಮಾಡುವ ಗಂಟಲಿಗೆ ಶಮನವನ್ನು ನೀಡುತ್ತದೆ. ಇದರಿಂದ ಕಫ ಕಡಿಮೆಯಾಗಿ ಕಟ್ಟಿದ ಮೂಗು ತೆರೆಯುವುದು.
ಅರಿಶಿನ ಹಾಲಿನಲ್ಲಿ ಸಕಲ ನೋವುಗಳನ್ನು ನಿವಾರಿಸಬಲ್ಲ ಶಕ್ತಿಯಿದೆ. ಇದು ದೇಹದಲ್ಲಿ ಬೆನ್ನುಮೂಳೆ ಮತ್ತು ಕೀಲುಗಳನ್ನು ಬಲಪಡಿಸುತ್ತದೆ.
ಅರಿಶಿನ ಹಾಲು ಸ್ವತಂತ್ರ ರಾಡಿಕಲ್‌ಗೆ ಹೋರಾಡುವ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು.
ಅರಿಶಿನ ಹಾಲು ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಈ ತೂಕವನ್ನು ನಿಯಂತ್ರಿಸಲು ಉಪಯೋಗಕಾರಿಯಾಗಿದೆ.
ಎಸ್ಕಿಮಾ ಚಿಕಿತ್ಸೆಗೆ ಅರಿಶಿನ ಹಾಲನ್ನು ಕುಡಿಯುವುದು ಉತ್ತಮ. ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು.
ಅರಿಶಿನದಲ್ಲಿ ಆಂಟಿಬೈಯಾಟಿಕ್ ಅಂಶ ಇರುವುದರಿಂದ ಹತ್ತಿಯನ್ನು ಅರಿಶಿನ ಹಾಲಿನಲ್ಲಿ ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಒತ್ತಿ ೧೫ ನಿಮಿಷಗಳ ಕಾಲ ಬಿಟ್ಟರೆ ಬಹಳ ಬೇಗ ಗುಣವಾಗುತ್ತದೆ. ಮತ್ತು ಮೊದಲಿಗಿಂತಲೂ ಚರ್ಮ ಹೊಳೆಯುವಂತೆ ಮಾಡುತ್ತದೆ.