ಅರಿಶಿನ ಮಾರುಕಟ್ಟೆಯಿಂದ ರೈತರು ಬಹಳ ಪ್ರಯೋಜನ ಪಡೆಯಬಹುದು

ಚಾಮರಾಜನಗರ, ಫೆ.23:- ಅರಿಶಿನ ಮಾರುಕಟ್ಟೆಯಿಂದ ರೈತರು ಬಹಳ ಪ್ರಯೋಜನ ಪಡೆಯಬಹುದು ಅರಿಶಿನಕ್ಕೆ ಹೊರ ದೇಶಗಳಲ್ಲಿ ಬಹಳಬೇಡಿಕೆ ಇದೆಎಂದು ನಬಾರ್ಡ್ ವ್ಯವಸ್ಥಾಪಕಿ ಹಿತ.ಜಿ. ಸುವರ್ಣ ತಿಳಿಸಿದ್ದರು.
ನಗರದ ಸಮೀಪದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅರಿಶಿನ ಮಾರುಕಟ್ಟೆಕುರಿತು ಆಯೋಜಿಸಿದ್ದ ಡಿಜಿಟಲ್ ತಂತ್ರಜ್ಞಾನ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ನಬಾಡ್ ಸಂಸ್ಥೆಯು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿಗಳನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ಡಿಜಿಟಲ್ ಮಾರುಕಟ್ಟೆಯಿಂದ ರೈತರು ನೀವು ಬೆಳೆದ ಬೆಳೆಗಳನ್ನು ನೇರವಾಗಿ ಮಾರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಕಿಶೋರ್ ಮಾತನಾಡಿ, ರೈತರು ಬೆಳೆದ ಸಾಂಬಾರ ಪದಾರ್ಥಗಳನ್ನು ಇಂಟರ್ ನ್ಯಾಷನಲ್ ಸಂಸ್ಥೆಗಳು ಕೊಂಡುಕೊಳ್ಳಲು ರೇಡಿಯಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು.
ಯಾವುದೇ ಎಜೇಂಟ್‍ಗಳ ಮಧ್ಯಸ್ಥಿಕೆ ಇರುವುದಿಲ್ಲ ಅರಿಶಿನ ಮಾರಾಟವಾದ ಮೇಲೆ ನಿಮ್ಮಖಾತೆಗೆ ಹಣ ಬರಲಿದೆಎಂದು ತಿಳಿಸಿದರು.
ತೋಟಗಾರಿ ಇಲಾಖೆ ಉಪ ನಿರ್ದೆಶಕ ಶಿವಪ್ರಸಾದ್ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಚಾಮರಾಜನಗರದಲ್ಲಿ ಅರಿಶಿನ ಬೆಳೆಯನ್ನು ಹೇರಳವಾಗಿ ಬೆಳೆಯುತ್ತಾರೆ. ಮೊದಲು ತಮಿಳುನಾಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರಾಟ ಮಾಡಬಹುದು. ಗುಣ ಮಟ್ಟವನ್ನು ಕಾಪಾಡಬೇಕಾಗುತ್ತದೆ ಎಂದು ನುಡಿದರು.
ಸಕಲೇಶಪುರ ಸಾಂಬಾರ ಮಂಡಳಿಯ ಅಧಿಕಾರಿ ಕುಮಾರ್ ಮಾತನಾಡಿ ಸಾಂಬಾರ ಬೇಳೆಗಳನ್ನು ಹೊರದೇಶಗಳಿಗೆ ಕಳುಹಿಸಿ ಸಬೇಕಾದರೆ ಸಾಂಬಾರ ಮಂಡಳಿಯ ಲೆಸನ್ಸ್‍ಬೇಕು.ಉತ್ತಮ ಗುಣಮಟ್ಟದಲ್ಲಿ ಸಾಂಬಾರ ಪದಾರ್ಥಗಳನ್ನು ಬೆಳೆಯಬೇಕಾಗುತ್ತದೆ. 15 ಲಕ್ಷ 30 ಸಾವಿರ ಟನ್ ಹೊರದೇಶಕ್ಕೆ ರಪ್ತು ಆಗುತ್ತಿದೆ.
ಅರಿಶಿನ ನಮ್ಮದೇಶದ ಮುಖ್ಯ ಬೆಳೆ. ಇದಕ್ಕೆ ಬಹಳ ಬೇಡಿಕೆ ಇದೆ.ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಪ್ತಮಾಣದಲ್ಲಿ ಅರಿಶಿನ ಬೆಳೆಯುತ್ತಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.