ಅರಿಶಿನ ಕಾಮಾಲೆ ಹಾಗೂ ಯಕೃತ್ತು ದೋಷಕ್ಕೆ ಮನೆಮದ್ದು

೧. ಅರಿಶಿನದ ಕೊಂಬನ್ನು ಮಜ್ಜಿಗೆಯಲ್ಲಿ ತೇಯ್ದು ಕುಡಿಯುತ್ತಾ ಬಂದರೆ ಅರಿಶಿನ ಕಾಮಾಲೆ, ಮೂಲವ್ಯಾಧಿ ಹಾಗೂ ಆಮಶಂಕೆಗೆ ಉತ್ತಮ ಪರಿಹಾರ.
೨. ಮಾಗಿದ ಬಾಳೆಹಣ್ಣು, ಜೇನುತುಪ್ಪ, ನಿಂಬೆರಸ ಇವನ್ನು ಚೆನ್ನಾಗಿ ಮಸೆದು ಸೇವಿಸಿದರೆ ಅರಿಶಿನ ಕಾಮಾಲೆಗೆ ಒಳ್ಳೆಯದು. (ಕೆಲವು ದಿನಗಳ ಕಾಲ)
೩. ಅರಿಶಿನ ಕಾಮಾಲೆಗೆ ಶುಂಠಿಯನ್ನು ಯಥೇಚ್ಛವಾಗಿ ಬಳಸುವುದರಿಂದ ಲಾಭವಿದೆ. ಶುಂಠಿ ಜಜ್ಜಿ ರಸ ತೆಗೆದು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಅರಿಶಿನ ಕಾಮಾಲೆ ರೋಗ ಗುಣಮುಖವಾಗುತ್ತದೆ.
೪. ಶುಂಠಿ, ಪುದಿನಾ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಅರಿಶಿನ ಕಾಮಾಲೆಗೆ ಉತ್ತಮ ಪರಿಹಾರ.
೫. ಯಕೃತ್ತು ದೋಷಕ್ಕೆ ಅರಳೇಕಾಯಿ ಕಷಾಯ ಮಾಡಿ ಆ ಕಷಾಯಕ್ಕೆ ಹಿಪ್ಪಲಿ ಚೂರ್ಣ ಬೆರೆಸಿ ಕುಡಿದರೆ ಯಕೃತ್ತು ಚೆನ್ನಾಗಿ ಕೆಲಸ ಮಾಡುತ್ತದೆ.
೬. ಶುದ್ಧ ಅರಿಶಿನಪುಡಿ, ತ್ರಿಫಲ ಚೂರ್ಣ ಎರಡನ್ನೂ ಸಮಪ್ರಮಾಣದಲ್ಲಿ ಬೆರೆಸಿ ತುಪ್ಪ ಅರ್ಧ ಚಮಚ, ಜೇನುತುಪ್ಪ ೧ ಚಮಚ ಹಾಕಿ ಚೆನ್ನಾಗಿ ಕಲಸಿ ತಿನ್ನಬೇಕು.
೭. ಸೇಬುಹಣ್ಣನ್ನು ಸಿಪ್ಪೆ ಸಹಿತವಾಗಿ ಪ್ರತಿನಿತ್ಯ ಸೆವಿಸುತ್ತಿದ್ದರೆ ಯಕೃತ್ತು ಚೆನ್ನಾಗಿ ಕೆಲಸ ಮಾಡುತ್ತದೆ.
೮. ಅನಾನಸ್ ಹಣ್ಣು ಯಕೃತ್ತಿನ ವಿಕಾರಗಳನ್ನು ಚೆನ್ನಾಗಿ ಸರಿಪಡಿಸುತ್ತದೆ.
೯. ಹಾಗಲಕಾಯಿ ರಸ ಅಥsವಾ ಹಾಗಲಕಾಯಿ ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ, ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ.
೧೦. ಪರಂಗಿಕಾಯಿಯ ಪಲ್ಯವನ್ನು ಮೇಲಿಂದ ಮೇಲೆ ಸೇವಿಸುವುದರಿಂದ ಲಿವರ್‌ಗೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆ ಆಗುತ್ತವೆ.
೧೧. ಕಹಿ ಸೋರೆಯ ಚಿಗುರನ್ನು ನೀರಿಗೆ ಹಾಕಿ ಕಷಾಯ ಮಾಡಿ ಸಕ್ಕರೆ ಹಾಕಿ ೧೨ ದಿನ ಕುಡಿದರೆ ಕಾಮಾಲೆ ರೋಗವು ಕಡಿಮೆ ಆಗುತ್ತದೆ.
೧೨. ನೆಲನೆಲ್ಲಿ ಸೊಪ್ಪನ್ನು ನುಣ್ಣಗೆ ಅರೆದು ಅದನ್ನು ಎಮ್ಮೆಯ ಮಜ್ಜಿಗೆಯಲ್ಲಿ ಕದಡಿ ಕುಡಿದರೆ ಕಾಮಾಲೆ ರೋಗವು ಹತೋಟಿಗೆ ಬರುತ್ತದೆ.
೧೩. ಅಮೃತಬಳ್ಳಿಯ ಕಷಾಯ ಮಾಡಿ ಕಲ್ಲುಸಕ್ಕರೆ ಹಾಕಿ ಏಳು ದಿನ ಬರೀಹೊಟ್ಟೆಯಲ್ಲಿ ಕುಡಿಯಬೇಕು.
೧೪. ಎಕ್ಕದ ಗಿಡದ ಬೇರನ್ನು ನೀರಿನಲ್ಲಿ ತೇಯ್ದು ಮೂಗಿನ ೨ ಹೊಳ್ಳೆಗಳಿಗೆ ಎರಡು – ಎರಡು ಹನಿ ಹಾಕಬೇಕು.
೧೫. ಸಿಹಿಮೂಲಂಗಿ ರಸಕ್ಕೆ ಸ್ವಲ್ಪ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ (ಸತತವಾಗಿ ೭ ದಿನಗಳ ಕಾಲ) ಸೇವಿಸುವುದರಿಂದ ಕಾಮಾಲೆ ರೋಗವು ಗುಣವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.