ಅರಿಶಿಣ ಮೂಟೆಗಳನ್ನು ಕದ್ದೋಯ್ಯುತ್ತಿದ್ದ ಆರೋಪಿಗಳ ಬಂಧನ

ಹನೂರು:ನ.09- ಪಟ್ಟಣದ ಯುವರಾಜ ಅರಿಶಿಣ ಇಂಡಸ್ಟ್ರಿಯಲ್ಲಿ 96 ಅರಿಶಿಣ ತುಂಬಿದ ಮೂಟೆಗಳನ್ನು ಕದ್ದೋಯ್ಯುತ್ತಿದ್ದ ಆರೋಪಿಗಳನ್ನು ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಠಾಣೆಗೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಅಪರ ಪೊಲೀಸ್ ಅಧೀಕ್ಷಕರಾದ ಅನಿತಾ ಹದ್ದಣ್ಣನವರ್ ಹಾಗೂ ಕೊಳ್ಳೇಗಾಲ ಡಿವೈಎಸ್‍ಪಿ ನಾಗರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಇಳಿದ ಹನೂರು ಇನ್ಸ್‍ಪೆಕ್ಟರ್ ರವಿನಾಯಕ್ ನೇತೃತ್ವದ ಪೊಲೀಸ್ ತಂಡ ಹನೂರು ಸಮೀಪದ ಎಡಹಳ್ಳಿ ದೊಡ್ಡಿ ಗ್ರಾಮದ ಹಲಗುಮೂಲೆ ಕ್ರಾಸ್ ಬಳಿ ಅರಿಶಿಣ ಸಾಗಿಸುತ್ತಿದ್ದ ಕೆಎ-04,ಎಎ-0106 ಈಚರ್ ವಾಹನ ಮತ್ತು ಕೆಎ-10.ಎ-5400 ಟಾಟಾ ಇಂಟ್ರಾ ವಾಹನದಲ್ಲಿದ್ದ ಅರಿಶಿಣ ಮೂಟೆ ಹಾಗೂ ವಾಹನವನ್ನು ವಶಕ್ಕೆ ಪಡೆದು ಚಾಲಕರನ್ನು ಬಂಧಿಸಿದ್ದಾರೆ.
ಪಿ.ಜಿ.ಪಾಳ್ಯ ಗ್ರಾಮ ಹಾಲಿ ವಾಸ ಕಾಂಚಳ್ಳಿ ಗ್ರಾಮ ಪರಿಶಿಷ್ಟ ಜಾತಿಗೆ ಸೇರಿದ ಚಂದ್ರಪ್ಪ ಅಲಿಯಾಸ್ ಚಂದ್ರ (35)ಬಿನ್ ಮಾದಯ್ಯ, ಹಾಗೂ ಕಾಂಚಳ್ಳಿ ಗ್ರಾಮದ ಪಡೆಯಾಚ್ಚಿ ಗೌಂಡರ ಜನಾಂಗದ ರಮೇಶ್ (28) ಗೋವಿಂದೇಗೌಡ ಇವರುಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಕಾಂಚಳ್ಳಿ ಗ್ರಾಮದ ರಾಜೇಶ ಅಲಿಯಾಸ್ ಕೆಂಚ ಬಿನ್ ಕೃಷ್ಣನ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‍ಐ ನಾಗೇಶ್, ಸಿಬ್ಬಂದಿಗಳಾದ ಸೈಯದ್ ಜಮೀಲ್ ಅಹಮ್ಮದ್, ಕಾಮರಾಜು, ಲಿಯಾಖತ್ ಅಲಿ ಖಾನ್, ಶಿವಕುಮಾರಸ್ವಾಮಿ, ರಾಘವೇಂದ್ರ, ಜೀಪ್ ಚಾಲಕ ಶಿವಕುಮಾರ್ ಪಾಲ್ಗೊಂಡಿದ್ದರು.