ಅರಿಶಿಣ ಮಧ್ಯೆ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನ

ಹನೂರು, ನ.8: ಜಮೀನಿನಲ್ಲಿ ಅರಿಶಿಣ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವಘಟನೆಹನೂರು ಪೊಲೀಸ್‍ಠಾಣೆಯ ವ್ಯಾಪ್ತಿಯನಾಗನಕಟ್ಟೆದೊಡ್ಡಿಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನನಾಗನಕಟ್ಟೆದೊಡ್ಡಿಗ್ರಾಮ ಪಡೆಯಾಚ್ಚಿ ಜನಾಂಗದವಡಿವೇಲು ಬಿನ್ ಮಾಧುಸ್ವಾಮಿ ಬಂಧಿತಆರೋಪಿ.
ಖಚಿತ ಮಾಹಿತಿಯನ್ನಾಧರಿಸಿ ಡಿವೈಎಸ್‍ಪಿ ನಾಗರಾಜು ನೇತೃತ್ವದಲ್ಲಿ ಹನೂರು ಪೊಲೀಸ್‍ಇನ್ಸ್‍ಪೆಕ್ಟರ್‍ರವಿನಾಯಕ್ ಹಾಗೂ ಸಿಬ್ಬಂದಿಗಳ ತಂಡಗಾಂಜಾ ಬೆಳೆದಿದ್ದ ಜಮೀನಿನಲ್ಲಿ ದಾಳಿ ನಡೆಸಿ ಹೂಗೊಂಡ ಬೀಜ ಮಿಶ್ರಿತ ಗಾಂಜಾ ಕೆನಬಿಸ್ ಒಟ್ಟು 120 ಗಿಡಗಳು. ಅಂದಾಜು 290 ಕೆ.ಜಿ.15 ಲಕ್ಷ ಮೌಲ್ಯದಗಾಂಜಾವನ್ನು ವಶಪಡಿಸಿಕೊಂಡು ಮುಂದಿನ ಕಾನೂನಿನ ಕ್ರಮಕೈಗೊಂಡಿದ್ದಾರೆ.
ದಾಳಿಯಲ್ಲಿ ಪಿ.ಎಸ್.ನಾಗೇಶ್, ಮುಖ್ಯ ಪೇದೆರಾಮದಾಸ್, ಪೇದೆಗಳಾದ ಬಿಳಿಗೌಡ, ರಾಮಶೆಟ್ಟಿ, ರಾಘವೇಂದ್ರ, ಚಂದ್ರು, ರಾಜು ಇದ್ದರು.