ಅರಿವು ಜಾಗೃತಿ ಜಾಥಾಕ್ಕೆ ನ್ಯಾ. ಕುಲಕರ್ಣಿ ಚಾಲನೆ

ಬಾಗಲಕೋಟೆ,ಅ.31 : ಭ್ರಷ್ಟಾಚಾರ ನಿಗ್ರಹದಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಭ್ರಷ್ಟಾಚಾರ ಜಾಗೃತಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಅರಿವು ಜಾಥಾಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಚಾಲನೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ನಡೆದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಸಪ್ತಾಹ ನವೆಂಬರ 2 ವರೆಗೆ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ನ್ಯಾಯಾಲಯದ ನ್ಯಾಯಾದೀಶೆ ಶೀಲಾ ಎನ್, ಸಿವಿಲ್ ಮತ್ತು ಸಿಜೆಎಂ ನ್ಯಾಯಾದೀಶರಾದ ಪ್ರಕಾಶ ವಿ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾದೀಶರಾದ ಎಂ.ಎ.ಎಚ್.ಮೊಗಲಾನಿ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಎಲ್.ಆರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಭ್ರಷ್ಟಾಚಾರ ನಿಗ್ರಹದಳದ ಡಿವಾಯ್‍ಎಸ್‍ಪಿ ಗಣಪತಿ ಗುಡಾಜಿ, ಪೊಲೀಸ್ ಇನ್ಸ್‍ಪೆಕ್ಟರ ಸಮೀರ ಮುಲ್ಲಾ, ವಿಶ್ವನಾಥ ಚೌಗಲಾ, ವಕೀಲರ ಸಂಘದ ಅಧ್ಯಕ್ಷ ವಿ.ಸಿ.ಚೌಕಿಮಠ, ಸರಕಾರ ಅಭಿಯೋಜಕ ಸುನೀಲ ಹಂಜಿ, ಎಂ.ಐ.ಸಂಗತ್ರಾಸ, ಸಹಾಯಕ ಅಭಿಯೋಜಕ ಶಾರದಾ ಬದಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.