ಅರಿವು ಆದರ್ಶಗಳನ್ನು ಬೋಧಿಸುವುದೇ ಗುರುವಿನ ಧರ್ಮ :  ರಂಭಾಪುರಿ ಶ್ರೀ

ಕಡೂರು.ಜೂ.೧; ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಅರಿವು ಆದರ್ಶಗಳನ್ನು ಬೋಧಿಸುವುದರ ಮೂಲಕ ಜಾಗೃತಿಯನ್ನು ಉಂಟು ಮಾಡುವುದೇ ಗುರುವಿನ ಧರ್ಮವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ತಾಲೂಕಿನ ಹುಲಿಕೆರೆ ದೊಡ್ಡಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಅಂತರAಗ ಬಹಿರಂಗ ಶುದ್ಧಿಗಾಗಿ ಶ್ರಮಿಸುವುದೇ ಎಲ್ಲ ಧರ್ಮಗಳ ಮೂಲ ಗುರಿಯಾಗಿದೆ. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ಆಶೆ ಆಮಿಷಗಳಿಲ್ಲದ ಜೀವನ ಶಾಂತಿ ನೆಮ್ಮದಿಗೆ ಮೂಲವಾಗಿದೆ. ಕರ್ತವ್ಯ, ಶಿಸ್ತು, ಶ್ರದ್ಧೆ, ನಿಷ್ಠೆ, ಛಲ ಮನುಷ್ಯನ ಉಜ್ವಲ ಬದುಕಿಗೆ ಅಡಿಪಾಯವಾಗಿರುತ್ತವೆ. ದೇಶದಲ್ಲಿ ರಾಜ, ಸಮಾಜದಲ್ಲಿ ಗುರು ಪರಿವಾರದಲ್ಲಿ ತಂದೆ ಮನೆಯಲ್ಲಿ ಸ್ತಿçà ಇವರು ಎಂದಿಗೂ ಸಾಧಾರಣ ವ್ಯಕ್ತಿಗಳಲ್ಲ. ಏಕೆಂದರೆ ಅಭಿವೃದ್ಧಿ ಮತ್ತು ವಿನಾಶ ಇವೆರಡೂ ಇವರ ಕೈಯಲ್ಲಿಯೇ ಇರುತ್ತವೆ. ಸುಳ್ಳಿನ ಕಡೆ ಜನ ಇದ್ದರೆ ಸತ್ಯದ ಕಡೆಗೆ ಭಗವಂತ ಇರುತ್ತಾನೆ. ಪರಶಿವನ ಸಾಕಾರ ರೂಪ ಗುರು ಎಂದು ರೇಣುಕ ಗೀತೆ ಸಾರಿದೆ. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ಸಕಲ ಸದ್ಭಕ್ತರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಶ್ರೀ ಮಠದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಗುರುತಿಸಿ ಇಂದು ವಿದ್ಯುಕ್ತವಾಗಿ ಶ್ರೀ ಗುರು ಪಟ್ಟಾಧಿಕಾರ ಅನುಗ್ರಹಿಸಿರುವುದು ಅತ್ಯಂತ ಸಂತೋಷವನ್ನು ತಂದಿದೆ. ನೂತನ ಶ್ರೀಗಳಿಗೆ ಪ್ರಾತ:ಕಾಲದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಸ್ಕಾರ ಮಾಡಿ ಷಟ್ಸ÷್ಥಲ ಬ್ರಹ್ಮೋಪದೇಶ ಮಾಡಿ ಗುರುತ್ವಾಧಿಕಾರ ಅನುಗ್ರಹಿಸಿದ್ದಾರೆ ಎಂದರು. ಆಗಮಿಸಿದ ಸಕಲ ಮಠಾಧೀಶರ ನೇತೃತ್ವದಲ್ಲಿ ಭಕ್ತ ಸಂಕುಲದ ಸಮ್ಮುಖದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ದಂಡ ಕಮಂಡಲ ಸಮೇತ ಪಂಚ ಮುದ್ರೆಗಳನ್ನು ಕೊಟ್ಟು ‘ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ರೇಶ್ಮೆ ಶಾಲು ಫಲ ಪುಷ್ಪ ಸ್ಮರಣಿಕೆಯಿತ್ತು ಶುಭ ಹಾರೈಸಿದರು. ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಬೆಳ್ಳಿ ಪ್ರಕಾಶ ‘ದಿವ್ಯ ಪ್ರಭೆ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಮಹಡಿ ಮನೆ ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲ್ದೂರಿನ ಬಿ.ಬಿ.ರೇಣುಕಾರ್ಯ ಉಪನ್ಯಾಸ ನೀಡಿದರು. ಹುಣಸಘಟ್ಟ, ಬಿಳಕಿ, ಹೊನ್ನವಳ್ಳಿ, ಶಂಕರದೇವರಮಠ, ಕೆ.ಬಿದರೆ, ಬೀರೂರು, ತಾವರೆಕೆರೆ, ತರೀಕೆರೆ, ಹಣ್ಣೆ, ಬೇರುಗಂಡಿಮಠ, ನಂದಿಪುರ, ಮಾದಿಹಳ್ಳಿ, ಫಲಹಾರಸ್ವಾಮಿ ಮಠ ಮತ್ತು ಕರಡಿಗವಿಮಠ ಶ್ರೀಗಳು ಉಪಸ್ಥಿತರಿದ್ದರು.ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಹೆಚ್.ಸಿ.ಕಲ್ಕರುಡಪ್ಪ, ಎಂ.ಎಲ್.ಮೂರ್ತಿ, ಹೆಚ್.ಎಂ.ಲೋಕೇಶ್, ಬಿ.ಎ.ಶಿವಶಂಕರ್, ಹೆಚ್.ಜಿ.ಮಲ್ಲೇಗೌಡ, ಹೆಚ್.ಜಿ.ರುದ್ರಮೂರ್ತಿ, ಡಾ.ವಿನಾಯಕ, ಹೆಚ್.ಎಂ.ನಾಗರಾಜು, ಯು.ಎಂ.ಬಸವರಾಜು, ಹೆಚ್.ಎಂ.ಕರಿಸಿದ್ಧಯ್ಯ, ಎಸ್.ಕೆ.ಕಲ್ಕರುಡಪ್ಪ, ಎಸ್.ಎನ್.ಮಂಜುನಾಥ, ರುದ್ರಸ್ವಾಮಿ, ದಿವಾಕರ್, ಎಸ್.ಪಿ.ಲೋಕೇಶ್, ನಾಯಕ್ ಎಸ್.ಎನ್.ಸಚ್ಚಿದಾನಂದ, ಗಂಗಮ್ಮ ಚಂದಯ್ಯ, ಹೆಚ್.ಎಂ.ಚAದ್ರು, ಪಟೇಲ್ ಶಾಂತಕುಮಾರ ಮೊದಲಾದ ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ವಹಿಸಿ ಮಾತನಾಡಿದರು. ಪಟ್ಟಾಭಿಷಿಕ್ತರಾದ ನೂತನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಮ್ಮ ಮೊದಲ ಧರ್ಮ ಸಂದೇಶದಲ್ಲಿ ಸಮಾಜದ ಆದರ್ಶ ಉಳಿಸಿ ಬೆಳೆಸಲು ಗುರು ಪೀಠಗಳ ಮಾರ್ಗದರ್ಶನದ ಅವಶ್ಯಕತೆಯಿದೆ. ವೀರಶೈವ ಧರ್ಮದ ಗುರು ಪರಂಪರೆಯ ಮಠಗಳು ಎಲ್ಲರ ಒಳಿತಿಗಾಗಿ ಶ್ರಮಿಸಿವೆ. ಹಿರಿಯ ಶ್ರೀಗಳ ಆದರ್ಶ ದಾರಿಯಲ್ಲಿ ಮುನ್ನಡೆದು ಧರ್ಮ ಸಂಸ್ಕೃತಿ ಬೆಳೆಸುವ ಕಾರ್ಯದಲ್ಲಿ ಶ್ರಮಿಸುವೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಶ್ರೀರಕ್ಷೆ ನಮಗಿರಲೆಂದು ಬಯಸಿದರು.ನೇತೃತ್ವ ವಹಿಸಿದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ಗುರುವಿನ ಪಾತ್ರ ಬಹಳಷ್ಟು ಮಹತ್ವವಾದದ್ದು. ಶ್ರೀ ಮಠದ ಪರಂಪರೆ ಮತ್ತು ಪರಮಾಚಾರ್ಯರ ಆಶೀರ್ವಾದ ಬಲದಿಂದ ಎಲ್ಲಾ ಕಾರ್ಯಗಳು ವಿಜೃಂಭಣೆಯಿAದ ಜರುಗಿದ್ದು ತಮಗೆ ಸಂತೋಷ ತಂದಿದೆ ಎಂದರು.ನಿತ್ಯ ಪಿ. ಮತ್ತು ಎಸ್.ಕೃತಿ ಇವರಿಂದ ಭರತ ನಾಟ್ಯ ಜರುಗಿತು. ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ.ಮಲ್ಲೇಶಪ್ಪ ಸ್ವಾಗತಿಸಿದರು. ಶಿಕ್ಷಕ ಬಿ.ಜೆ. ಜಗದೀಶ ನಿರೂಪಿಸಿದರು. ಹೆಚ್.ಸಿ.ಮಹಾಲಿಂಗಯ್ಯ ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದ ನಂತರ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.