ಅರಿವಿನ ಪಯಣ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ:ಜ.15: ನಗರದ ಎ.ಜಿ.ವುಮೆನ್ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ನಗರದ ನಾನಾ ಮಹಿಳಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಅರಿವಿನ ಪಯಣ ಕಾರ್ಯಕ್ರಮಕ್ಕೆ ಹೋರಾಟಗಾರ ಡಾ.ಪ್ರಭು ಖಾನಾಪುರೆ ಅವರು ಚಾಲನೆ ನೀಡಿ ಮಾತನಾಡುತ್ತಾ ಇಂದು
ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಕೇವಲ ಮಹಿಳೆಯರದ್ದೇ ಮಾತ್ರವಲ್ಲ, ಅದು ಇಡೀ ಸಮಾಜದ ಸಮಸ್ಯೆಯಾಗಿದೆ ಎಂದು ಹೇಳಿದರು.
ಮಹಿಳೆ ಕೇವಲ ಮಹಿಳೆಯಾಗಿದರೆ ಆಕೆ, ಇಡೀ ಪುರುಷ ಪ್ರಧಾನ ಸಮಾಜದ ಚಲಾವಣೆಯ ವ್ಯಕ್ತಿಯಾಗಿದ್ದಾಳೆ. ಆಕೆ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಮತ್ತು ಇತರೆಲ್ಲ ಸಂದರ್ಭದಲ್ಲಿ ಕಷ್ಟ ಸಹೀಷ್ಣುವಾಹಿ ಮನೆ ನಿಭಾಯಿಸುತ್ತಾಳೆ, ಕುಟುಂಬ ನಿರ್ವಹಣೆ ಮಾಡುತ್ತಾಳೆ. ಆದ್ದರಿಂದ ಆಕೆಯ ಮತ್ತು ಆಕೆ ಎದುರಿಸುವ ಸಮಸ್ಯೆಗಳು ಕೇವಲ ಆಕೆಯದ್ದಲ್ಲ. ಅದು ಸಮಾಜದ್ದು ಎಂದು ಖಾನಾಪುರೆ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ ಹಾಡು, ನಾಟಕ, ಸಂವಾದ, ಕಥೆಗಳ ಮೂಲಕ ಲಿಂಗ ಸಂವೇದನಾಶೀಲತೆ ಮೂಡಿಸುವುದು ಹೆಚ್ಚು ಪರಿಣಾಮಕಾರಿ. ನೂರು ಉಪದೇಶಗಳಿಗಿಂತ ಒಂದು ಮನುಷ್ಯರನ್ನು ಸಾಕಷ್ಟು ಬದಲಿಸುತ್ತದೆ. ಇಂಥ ಅರಿವಿನ ಪಯಣದಲ್ಲಿ ನಮ್ಮ ಕಾಲೇಜು ಯಾವತ್ತೂ ಮುಂಚೂಣಿಯಲ್ಲಿ ಇರಲಿದೆ ಎಂದು ಹೇಳಿದರು. ಮುಖ್ಯ ಅತಿಥಿ ಪೆÇ್ರ ಎನ್.ಜಿ ಪಾಟೀಲ ಮಾತನಾಡಿದರು.
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕರಾದ ಮೀನಾಕ್ಷಿ ಬಾಳಿ, ಆಯ್.ಟಿ.ಆಯ್ ವಿದ್ಯಾಲಯದ ಡಾ. ರುಬಿನಾ, ವಿ.ಜಿ ಕಾಲೇಜಿನ ಡಾ ಶರಣಮ್ಮ ಕುಪ್ಪಿ ಪೆÇ್ರ. ಕುಪ್ಪಿ, ಶಕುಂತಲಾ ಬಿ, ಪೆÇ್ರ . ಶಿವಲೀಲಾ ಧೋತೆ, ಡಾ. ಸುಷ್ಮಾ ಕುಲಕರ್ಣಿ, ಜನವಾದಿ ಮಹಿಳಾ ಸಂಘಟನೆಯ ಮುಖ್ಯಸ್ಥರಾದ ಪದ್ದೀನಿ ಕಿರಣಗಿ, ಜಗದೇವಿ ನೂಲಕರ್, ಶಹನಾಜ್ ಬೇಗಂ, ಹಾಗೂ ರಾಜ್ಯದ ಮೂಲೆ ಆಗಮಿಸಿ ವಿವಿಧ ಕಾಲೇಜುಗಳಲ್ಲಿ ಸಾಂಸ್ಕೃತಿಕ ಆಂದೋಲನ ಮೂಲೆಗಳಿಂದ ಮಾಡಿದ ವಾಣಿ ಪೆರಿಯೋಡಿ ಮಂಗಳೂರು, ಅಖಿಲಾ ವಿದ್ಯಾಸಂದ್ರ ಬೆಂಗಳೂರು, ಮಲ್ಲಿಗೆ ಸಿರಿಮನೆ ಮಂಡ್ಯ, ಶೀಲಾ ಹಾಲಕುರ್ಕಿ ಕೊಪ್ಪಳ, ರೇಖಾಂಬಾ ಶಿವಮೊಗ್ಗ ವೃಂದಾ ಹೆಗಡೆ ಶಿವಮೊಗ್ಗ ಮಲ್ಲಮ್ಮ ಯಾಳವಾರ ವಿಜಯಪುರ, ಪ್ರಬುದ್ಧ ಭಾರತ ಸಂಘಟನೆಯ ಅಶ್ವಿನಿ ಮದನಕರ್ ವಿಜಯ ದಬ್ಬೆ ಪ್ರಾರ್ಥನೆ ಹಾಡಿದರು. ಪೆÇ್ರ. ಶಿವಲೀಲಾ ಧೋತ್ರೆ ವಂದಿಸಿದರು. ಡಾ ಶರಣಮ್ಮ ಕುಪ್ಪಿ ಸ್ವಾಗತಿಸಿದರು.