ಅರಿವಿನ ಜ್ಞಾನ ನೀಡಿದವರೆ ಗುರುಗಳು

ಔರಾದ : ಜು.15:ತಂದೆ ತಾಯಿ ಮೊದಲ ಗುರುವುರಾದರೆ ಅಕ್ಷರ ಜ್ಞಾನ ನೀಡಿದ ನಂತರ ನಮಗೆ ಒಳ್ಳೆಯದು ಕೆಟ್ಟದು ಬಗ್ಗೆ ತಿಳಿಸಿ ಅರಿವಿನ ಜ್ಞಾನ ನೀಡಿದವರು ಗುರುಗಳು ಎಂದು ಸಿದ್ದರಾಮೇಶ್ವರ ಕಾಲೇಜಿನ ಉಪನ್ಯಾಸಕಿ ಮೀರಾತಾಯಿ ಕಾಂಬಳೆ ಹೇಳಿದರು.

ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುದುವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೊತ್ತಿಲ್ಲದ ವಿಷಯದಿಂದ ಗೊತ್ತಾಗುವ ವಿಷಯ ಕಡೆ ಕೊಂಡೊಯ್ಯುವರೇ ಗುರುಗಳು ಅವರ ಕಾರ್ಯ ಅಮೋಘವಾಗಿದೆ ಹಾಗೂ ಇಂದಿನ ಎಲ್ಲಾ ಸಾಧನೆಗಳಿಗೆ ಮೂಲ ಕಾರಣಭೂತರು ಗುರುಗಳೇ ಆಗಿದ್ದಾರೆಂದು ಹೇಳಿದರು.

ಅಂಬಿಕಾ ವಿಶ್ವಕರ್ಮ ಮಾತನಾಡಿ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು, 150ಕ್ಕೂ ಹೆಚ್ಚು ವಚನಗಳು ಇವರು ಬರೆದಿದ್ದಾರೆ. ಇವರ ವಚನಗಳಿಂದ ಕಾಯಕಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗುರುಗಳಿಗೆ ಸನ್ಮಾನಿಸಿ ಆರತಿ ಬೆಳಗಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ್ ನವೀಲಕುಮಾರ್ ಉತ್ಕಾರ್, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಈರಮ್ಮ ಕಟಗಿ, ಸ್ವಾತಿ ಸಿರಂಜಿ, ವನದೇವಿ ಎಕ್ಕಳೆ, ಸುಧಾ ಕೌಟಿಗೆ ಸೇರಿದಂತೆ ಇನ್ನಿತರರಿದ್ದರು.