ಅರಿವಿನಿಂದ ಮನುಷ್ಯನಿಗೆ ಗೌರವ: ಗುರುಮಹಾಂತ ಶ್ರೀ


ಹುನಗುಂದಮಾ.21-ಬಸವಣ್ಣನವರ ಸಮಾನತೆ ಬಂದಿದ್ದು ಅರಿವುನಿಂದ ಹೊರತು ಪುಸ್ತಕದಿಂದ ಅಲ್ಲ ಎಂದು ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಇಳಕಲ್ಲಿನ ಗುರುಮಹಾಂತ ಸ್ವಾಮಿಗಳು ಹೇಳಿದರು.
ಪಟ್ಟಣದ ವ್ಹಿ.ಎಂ.ಎಸ್.ಆರ್.ವಸ್ತ್ರದ ಕಲಾ,ವಿಜ್ಞಾನ ಹಾಗು ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾಲೇಜು ಒಕ್ಕೂಟ ಉದ್ಘಾಟನೆ ಹಾಗೂ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ಮನುಷ್ಯನಲ್ಲಿ ಎರಡು ಬೆಳವಣಿಗೆಗಳು ಮುಖ್ಯ.ಒಂದು ದೇಹ ಇನ್ನೊಂದು ಅರಿವು.ದೇಹದ ಜತಗೆ ಅರಿವು ಬೆಳೆದಾಗ ಮಾತ್ರ ಮನುಷ್ಯನಿಗೆ ಗೌರವ ಸಿಗುತ್ತದೆ ಎಂದರು.
ಇಂದಿನ ಒತ್ತಡದ ಜೀವನದಲ್ಲಿ ಜನರು ಬೇಕಾಬಿಟ್ಟಿ ಆಹಾರ ಸೇವಿಸುತ್ತಿದ್ದು ಇದರಿಂದ ಮುಂದಿನದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಹೀಗಾಗಿ. ಪೌಷ್ಠಿಕಯುಕ್ತ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಜಾಜಿ ಮಲ್ಲಿಗೆ ಕವಿ ಡಾ.ಸತ್ಯಾನಂದ ಪಾತ್ರೋಟ ಮಾತನಾಡಿ ಸಾವಿರಾರು ವರ್ಷಗಳಿಂದ ಅಸ್ಪೃಶ್ಯರನ್ನು ಮುಟ್ಟಿಸಿಕೊಳ್ಳದಿರುವುದು ಈ ದೇಶದ ದುರಂತ. ಜ್ಯಾತ್ಯತೀತ ರಾಷ್ಟ್ರದಲ್ಲಿ ಜಾತೀಯತೆ ಮಾಡುವುದು ಚಟವಿದ್ದ ಹಾಗೆ ಅದನ್ನು ತೊಲಗಿಸಲು ಗುರುಮಹಾಂತ ಶ್ರೀಗಳು ಜೋಳಿಗೆ ಹಾಕಬೇಕು ಎಂದರು.
ಮನುಷ್ಯರನ್ನು ಮನುಷ್ಯರಾಗಿ ಕಾಣದಿದ್ದರೆ ಮನುಷ್ಯತ್ವಕ್ಕೆ ಬೆಲೆಯಿಲ್ಲ. ಶಿಕ್ಷಕರಾದವರು ವಿದ್ಯಾರ್ಥಿಗಳನ್ನು ತಮ್ಮ ಜ್ಞಾನದ ಮೂಲಕ ಸತ್ಪ್ರಜೆಯನ್ನಾಗಿ ಮಾಡುವ ಕಾರ್ಯ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ವಿ.ಮ.ಸಂಘದ ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಪದವಿ ವಿಭಾಗದ ಪ್ರಚಾರ್ಯೆ ಶಶಿಕಲಾ ಮಠ.ಪದವಿ ಪೂರ್ವ ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ, ಪಿ.ಎಸ್.ಐ ಶರಣಬಸಪ್ಪ ಸಂಗಳದ, ಪೆÇ್ರ.ಎಸ್.ಬಿ.ಚಳಗೇರಿ, ಪೆÇ್ರ.ಎಸ್.ಎಸ್.ಆದಾಪೂರ ವಿದ್ಯಾರ್ಥಿ ಕಾರ್ಯದರ್ಶಿ ಸನಾಕೌಸರ್ ಯಡಹಳ್ಳಿ ಉಪಸ್ಥಿತರಿದ್ದರು.