ಅರಾಮಿಲ್ಲವೆಂದು ಅತಿಥಿಗೃಹದಲ್ಲೇ ಸಭೆ ನಡೆಸಿ ಹೋದ ಅಂಗಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.23: ನಗರಕ್ಕೆ ಆಗಮಿಸಿದ್ದ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಇಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ. ಇಲಾಖೆಯ ಅಧಿಕಾರಿಗಳೊಂದಿಗೆ ತಮಗೆ ಅರಾಮ ಇಲ್ಲವೆಂದು  ನಗರದ ಅತಿಥಿ ಗೃಹದಲ್ಲಿಯೇ  ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಹೋಗಿದ್ದಾರೆ.
ನಿನ್ನೆ ಬೆಂಗಳೂರಿನಿಂದ ವಿಮಾನದಲ್ಲಿ ಬಂದ ಅವರು, ಬಳ್ಳಾರಿ ಜಿಲ್ಲೆಯ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ  ನಿಗಮ, ಇಂಫ್ಯಾಕ್ಟ್  ಜೋನ್ ನಡಿ ಕೆ.ಎಂ.ಆರ್.ಇ.ಸಿ ಅನುದಾನದಡಿ ಅಳವಡಿಸಿಕೊಳ್ಳ ಬಹುದಾದ ಮತ್ತು ಕಾರ್ಯಗತಗೊಳಿಸ ಬಹುದಾದ ಯೋಜನೆಗಳ ಕುರಿತಂತೆ ಸ್ಥಳೀಯ ಕ್ಷೇತ್ರ ಪರಿವೀಕ್ಷಣೆ, ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬಳ್ಳಾರಿ ಜಿಲ್ಲೆ ಇವರ ಸಮ್ಮುಖದಲ್ಲಿ ಸ್ಥಳೀಯ ಕ್ಷೇತ್ರ ಪರಿವೀಕ್ಷಣೆ ಇತ್ತು. ಇದರಡಿ ಕುರೆಕುಪ್ಪೆ ಮೊದಲಾದ ಕಡೆ ಒಂದಿಷ್ಟು ಓಡಾಡಿ ಸ್ಥಳ ಪರಿಶೀಲನೆ ನಡೆಸಿದರಂತೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಇತ್ತು. ಅಲ್ಲಿ ನಡೆಸದೆ. ಅತಿಥಿಗೃಹದಲ್ಲೇ ನಡೆಸಿ ಬೆಂಗಳೂರಿಗೆ ಮತ್ತೆ ವಿಮಾನದಲ್ಲಿ ತೆರಳಿದರಂತೆ.
ಇದು ಈ ಸರ್ಕಾರದ ಸಚಿವರ ಕಾರ್ಯ ವೈಖರಿ. ಅವರು ಬಂದು ಹೋದ್ದರ ಬಗ್ಗೆ, ಇಲಾಖೆಯ ಅಧಿಕಾರಿಗಳಾಗಲಿ,  ವಾರ್ತಾ ಇಲಾಖೆಯಾಗಲಿ  ಮಾಧ್ಯಮಗಳಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡದೇ ಇದ್ದುದು ಸೋಜಿಗವಾಗಿದೆ.