ಅರಸು ಜನ್ಮ ದಿನ ನಿತ್ಯ ಆಚರಿಸಿ-ಎಸ್.ಮುನಿಸ್ವಾಮಿ

ಕೋಲಾರ,ಆ,೨೧- ಸಾಮಾಜಿಕ ಹರಿಕಾರ, ಹಿಂದುಳಿದ ನೇತಾರ, ಈ ರಾಜ್ಯ ಕಂಡಂತ ಅಪ್ರತಿಮ ಮಾಜಿ ಮುಖ್ಯ ಮಂತ್ರಿ ಶ್ರೀ ದೇವರಾಜ್ ಅರಸ್ ಅವರ ಜನ್ಮದಿನಾಚರಣೆಯನ್ನು ಒಂದು ದಿನಕ್ಕೆ ಸೀಮಿತ ಮಾಡದೆ ದಿನನಿತ್ಯ ಆಚರಿಸುವಂತಾಗ ಬೇಕು,ಕರ್ನಾಟಕ ರಾಜ್ಯಕ್ಕೆ ಅವರು ನೀಡಿದಂತ ಅಪಾರ ಕೊಡುಗೆಗಳನ್ನು ರಾಜ್ಯದ ಜನತೆಗೆ ಎಂದಿಗೂ ಮರೆಯಲಾರರು ಅವರು ತೋರಿದ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ನಮ್ಮ ರಾಜ್ಯವು ಸುವರ್ಣ ಕರ್ನಾಟಕವಾಗಲು ಸಾಧ್ಯ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯ ಪಟ್ಟರು,
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾ ಇಲಾಖೆ, ಡಿ.ದೇವರಾಜ್ ಅರಸ್ ಅಭಿವೃದ್ದಿ ನಿಗಮ,ಕನ್ನಡ ಮತ್ತು ಸಂಸೃತಿ ಇಲಾಖೆ, ಹಾಗು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ್ ಅರಸ್ ಅವರ ೧೦೮ನೇ ಜನ್ಮ ದಿನಾಚರಣಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು,
ಕಾನೂನು ಕಠಿಣವಾದರೆ ಅಪರಾಧ ಸಂಖ್ಯೆಗಳು ಕಡಿಮೆಯಾಗಲು ಸಾಧ್ಯ.ದೇಶದಲ್ಲಿ ಶೇ ೭೦ರಷ್ಟು ಯುವ ಜನತೆಯಿದ್ದು ಅವರಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಿದೆ. ಯುವ ಜನತೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವಂತಾಗ ಬೇಕು ಎಂದು ಕರೆ ನೀಡಿದರು,
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಶಾಸಕ ಸಮೃದ್ದಿ ಮಂಜುನಾಥ್, ಜಿಲ್ಲಾಧಿಕಾರಿ ಅಕ್ರಂಪಾಷ, ಜಿಲ್ಲಾ ಪಂಚಾಯತ್ ಸಿ.ಇ.ಓ. ಪದ್ಮ ಬಸವಂತಪ್ಪ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಭಾಸ್ಕರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣಿಕರ್,ಯು, ಸಂಪನ್ಮೋಲ ವ್ಯಕ್ತಿಗಳಾಗಿ ಸಹ ಪ್ರಾಧ್ಯಾಪಕ ಡಾ.ಆರ್. ಶಂಕರಪ್ಪ. ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಬಾಬು,ಮುಖಂಡರಾದ ಡಾ. ಎಂ. ಚಂದ್ರಶೇಖರ್,ಮಂಜುನಾಥ್, ಯುವರಾಜ್, ನಂದೀಶ್, ವೆಂಕಟೇಶ್ ಗೌಡ, ಓಬಿಸಿ ಅಶೋಕ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಅಶ್ವಥ್, ರಾಜೇಶ್ ಸಿಂಗ್, ಕೃಷ್ಣಮೂರ್ತಿ, ಮುನಿವೆಂಕಟಪ್ಪ, ರೌತ್ ಶಂಕರಪ್ಪ, ಡೆಕೋರೆಟ್ ಕೃಷ್ಣ ಮುಂತಾದವರು ಭಾಗವಹಿಸಿದ್ದರು,
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳಾದವು.
ಜಾನಪದ ಕಲಾವಿದ ವೆಂಕಟಚಲಪತಿಯವರಿಂದ ನಾಡಗೀತೆ, ರೇಣುಕಾ ನಿರೂಪಣೆ, ದೇವರಾಜು ಅರಸು ಅಭಿವೃದ್ದಿ ನಿಗಮದ ಪ್ರಸನ್ನ ಸ್ವಾಗತಿಸಿದರು,