ಅರಸು ಆಡಳಿತ ಅಜರಾಮರ: ದೇವಿಂದ್ರ

ಕಲಬುರಗಿ:ಆ.20:ಅರಸು ಆಡಳಿತಾತ್ಮಕ ಯೋಜನೆಗಳು ಅಜರಾಮರವಾಗಿದ್ದು, ಇತರರಿಗೆ ಮಾದರಿಯಾಗಿದೆಎಂದು ಶಿಕ್ಷಣತಜ್ಞದೇವಿಂದ್ರ ವಿಶ್ವಕರ್ಮ ಹೇಳಿದರು.ಅವರುಕಲಬುರಗಿನಗರದರಾಮಮಂದಿರ ಸರ್ಕಲ್ ಹತ್ತಿರವಿರುವ ವಿಶ್ವನಾಥಎಜ್ಯುಕೇಷನ್‍ಆಂಡ್‍ರೂರಲ್‍ಡೆವಲಪಮೆಂಟ್ ಸೊಸೈಟಿಯಲ್ಲಿಆಯೋಜಿಸಿದ್ದ ಡಿ. ದೇವರಾಜಅರಸುಅವರ 108ನೇ ಜನ್ಮದಿನ ಆಚರಣೆಕಾರ್ಯಕ್ರಮಉದ್ಘಾಟಿಸಿ ಮಾತನಾಡಿದಅವರು, ಪ್ರತಿಯೊಬ್ಬರುಆದರ್ಶ ವ್ಯಕ್ತಿಗಳ ಗುಣ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಡಿ. ದೇವರಾಜಅರಸುಧ್ವನಿ ಇಲ್ಲದವರ ಪರವಾಗಿಧ್ವನಿ ಆದವರು. ಅವರ ಸಮಾಜಮುಖಿ ಕೆಲಸಗಳು, ಪ್ರಗತಿಪರಯೋಜನೆ ಮತ್ತು ಕಾರ್ಯಗಳು ಅವಿಸ್ಮರಣಿಯ.ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕಾಗಿವಿದ್ಯಾರ್ಥಿ ನಿಲಯಗಳ ಪರಿಕಲ್ಟನೆಯನ್ನು ಈ ರಾಜ್ಯಕ್ಕೆಕೊಟ್ಟಿದ್ದಾರೆ.ಸಮಾಜಕ್ಕೆಅವರ ಕೊಡುಗೆಗಳು ಅಪಾರ.ಡಿ. ದೇವರಾಜಅರಸುಅವರುಎರಡು ಬಾರಿ ಮುಖ್ಯಮಂತ್ರಿಗಳಾಗಿ ಅವರಅಧಿಕಾರವಧಿಯಲ್ಲಿಉಳುವವನೆ ಭೂಮಿಯಒಡೆಯ ಶಾಸನ ತರುವ ಮೂಲಕ ರಾಜ್ಯದೊಳಗೆ ಹಲವಾರು ಸುಧಾರಣೆಗಳನ್ನು ತಂದರು. ಹಿಂದುಳಿದ ವರ್ಗಕ್ಕೆ ಮೀಸಲಾತಿ ಸೌಕರ್ಯ ಕಲ್ಪಿಸಿದರು ಎಂದು ಹೇಳಿದರು.ಈ ಸಂಧರ್ಭದಲ್ಲಿವಿದ್ಯಾರ್ಥಿಗಳಾದ ಬೇಬಿ, ಪವಿತ್ರ, ಪ್ರಿಯಂಕಾ, ಬಿಂದುಶ್ರೀ, ಧನುಷ್, ವಿನಾಯಕ, ಪ್ರಸಾದ ಸೇರಿ ಸಂಸ್ಥೆಯ ಸದಸ್ಯರು ಮುಂತಾದವರುಹಾಜರಿದ್ದರು.