ಅರಸೀಕೆರೆ ಆಸ್ಪತ್ರೆಗೆ ಸಂಸದ ವೈ. ದೇವೇಂದ್ರಪ್ಪದಿಢೀರ್ ಭೇಟಿ

ಹರಪನಹಳ್ಳಿ.ಮೇ.೨:  ಸಂಸದ ವೈ. ದೇವೇಂದ್ರಪ್ಪ ಹರಪನಹಳ್ಳಿ ತಾಲ್ಲೂಕಿನ ತಮ್ಮ ಸ್ವಗ್ರಾಮವಾದ ಅರಸೀಕೆರೆಯ ಸಮುದಾಯ ಅರೋಗ್ಯ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿ ಸ್ಯಾನಿಟೈಸರ್, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇಲ್ಲದ ಕಾರಣ ಅಧಿಕಾರಿಗಳ ಮೇಲೆ ಗರಂ ಆಗಿರುವ ಘಟನೆ ನಿನ್ನೆ ಜರುಗಿದೆ.ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ  ಸಮುದಾಯ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಕೊರೋನೋ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎಂದು ಜಿಲ್ಲಾ ಅರೋಗ್ಯಧಿಕಾರಿಗಳಿಗೆ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಲಾಗುವುದು. ಎಂದು ಅವರು ಹೇಳಿದರು.ಕೂಡಲೇ ತಾಲೂಕು ವೈಧ್ಯಾಧಿಕಾರಿಯನ್ನು ಕರೆಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಹಾಗೂ  ಸಿಬ್ಬಂದಿಗಳು ಕರ್ತವ್ಯದಲ್ಲಿರಬೇಕು, ಔಷಧಿಗಳನ್ನು ಸಂಗ್ರಹಣೆ ಮಾಡಿಕೊಳ್ಳಬೇಕು, ಆಕ್ಸಿಜೆನ್ ಕೊಠಡಿಗಳನ್ನು ಬೇಗ ಪೂರ್ಣಗೊಳಿಸಬೇಕು, ಕರ್ತವ್ಯಲೋಪವೆಸಗುವರನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಿ ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ಸಂಸದರಾದ ವೈ. ದೇವೇಂದ್ರಪ್ಪನವರು ತಾಕೀತು ಮಾಡಿದರು.ಈ ಸಂದರ್ಭದಲ್ಲಿ ತಾಲ್ಲೂಕು ವೈಧ್ಯಾಧಿಕಾರಿಗಳಾದ ವೆಂಕಟೇಶ್, ಮುಖಂಡರಾದ ಯರಬಳ್ಳಿ ಉಮಾಪತಿ, ಪುಣಭಘಟ್ಟ ಬಾಲಚಂದ್ರಯ್ಯ, ಸತೀಶ್, ಪೂಜಾರ್ ಮರಿಯಪ್ಪ ಹಾಗೂ  ಕೊಟ್ರೇಶ್ ಇತರರು ಹಾಜರಿದ್ದರು