
ಹರಪನಹಳ್ಳಿ.ಜು.12: ತಾಲ್ಲೂಕಿನ ಅರಸೀಕೆರೆಯಲ್ಲಿ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ದಿ ಉದ್ಯಮಶೀಲತಾ ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್, , ತಾಲ್ಲೂಕು ಪಂಚಾಯಿತಿ , ಅರಸೀಕೆರೆ ಗ್ರಾಮ ಪಂಚಾಯಿತಿ ಹರಿಹರೇಶ್ವರ ಸಂಜೀವಿನಿ ಒಕ್ಕೂಟ ರವರಿಂದ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಶ್ರೀ ಕೋಲಶಾಂತೇಶ್ವರ ಮಠದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ನಾಯ್ಕ್ ಉದ್ಘಾಟಿಸಿ ಮಾತನಾಡಿ ಅವರು ರಾಷ್ಟ್ರೀಯ ಗ್ರಾಮೀಣ ಮಹಿಳಾ ಒಕ್ಕೂಟದವರು ಹಾಗೂ ಸ್ವಸಹಾಯ ಸಂಘಗಳು ಸಿದ್ದ ವಸ್ತುಗಳನ್ನು, ಸಿದ್ಧ ಉಡುಪುಗಳನ್ನು ತಯಾರಿಸುತ್ತಾರೆ, ಇವರಿಗೆ ಮಾರ್ಕೆಟಿಂಗ್ ವ್ಯವಸ್ಥೆ ಇಲ್ಲ. ತಾಲ್ಲೂಕು, ಜಿಲ್ಲಾ,ರಾಜ್ಯ ಮಟ್ಟದಲ್ಲಿದೆ.ಹೋಬಳಿ ಮಟ್ಟದಲ್ಲಿ ಅರಸೀಕೆರೆ, ಉಚ್ಛಗಿದುರ್ಗ,ತೆಲಿಗಿ ಮೂರು ಕಡೆ ಮಾರ್ಕೆಟಿಂಗ್ ಮಳಿಗೆ ತೆರೆಯಲು ಸರ್ಕಾರಕ್ಕೆ ಅನುಮೋದನೆಗೆ ಕಳಿಸಿದ್ದೇವೆ.ಮಹಿಳಾ ಸಂಘಗಳಿಗೆ ಗ್ರಾಮ ಪಂಚಾಯಿತಿಯವರು ಸಹಕಾರ ನೀಡಬೇಕು,ಈ ಯೋಜನೆಯು ಎಲ್ಲರಿಗೂ ಸದುಪಯೋಗವಾಗಲಿ, ನಮ್ಮಿಂದ ಏನಾದರೂ ಸಲಕರಣೆಗಳು ಬೇಕಿದ್ದರೆ ಕೊಡುತ್ತೇವೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೈ.ರೇಖಾ ಕೊಟ್ರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿವಿಧ ಊರಿನ ಸ್ವ ಸಹಾಯ ಸಂಘದವರು ತಯಾರಿಸಿಕೊಂಡು ಬಂದಿರುವ ತಿಂಡಿ,ತಿನಿಸುಗಳನ್ನು ಪ್ರತಿಯೊಬ್ಬರೂ ಖರೀದಿಸಿ ಮಹಿಳಾ ಸಂಘಗಳಿಗೆ ಸಹಾಯ ಮಾಡಿ, ನಮ್ಮ ಪಂಚಾಯಿತಿ ವತಿಯಿಂದ ನಮ್ಮ ವ್ಯಾಪ್ತಿಯಲಿಯ ಅಧಿಕಾರಿ ಬಳಸಿ ಸ್ವ ಸಹಾಯ ಮಹಿಳಾ ಸಂಘಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ಕಾರ್ಯಕ್ರಮಕ್ಕೆ ವಿವಿಧ ತಿಂಡಿ ತಿನಿಸುಗಳನ್ನು ಹಿರೇಮೇಗಳಗೆರೆ, ಚಟ್ನಳ್ಳಿ, ಉಚ್ಚಗಿದುರ್ಗ,ತೌಡೂರು, ಯರಬಳ್ಳಿ, ನಿಚ್ಚವ್ವನಹಳ್ಳಿ, ಅರಸೀಕೆರೆ,ಚಿಗಟೇರಿ ಮತ್ತು ಬೆಣ್ಣಿಹಳ್ಳಿ ಹಳ್ಳಿಗಳಿಂದ ತಯಾರಿಸಿಕೊಂಡು ಬಂದಿದ್ದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಾದ ಚಂದ್ರನಾಯ್ಕ್, ಖಲೀಲ್ ಸಾಹೇಬ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಮ್.ಚಂದ್ರಪ್ಪ, ಸದಸ್ಯರಾದ ಫರ್ಜನಾ ಬಾನು, ಡಿ.ಅಕ್ಕಮ್ಮ, ವಿಶಾಲಾಕ್ಷಮ್ಮ,ಅಡ್ಡಿ ಚನ್ನವೀರಪ್ಪ, ಹನುಮಂತ,ಪಿಡಿಒ. ಅಂಜಿನಪ್ಪ, ತಾಲ್ಲೂಕು ಮೇಲ್ವಿಚಾರಕಿಯಾದ ಪವಿತ್ರ, ಸಲಾಂ ಸಾಹೇಬ್, ಮರಿಯಪ್ಪ,ಹಾಲೇಶ್ ಹಾಗೂ ಸುತ್ತ ಮುತ್ತಲಿನ ಸ್ವ ಸಹಾಯಕ ಸಂಘದವರು ಹಾಜರಿದ್ದರು.