ಅರಸೀಕೆರೆಯಲ್ಲಿ ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ

ಹರಪನಹಳ್ಳಿ.ಜು.೨೭ : ತಾಲೂಕಿನ ತೌಡೂರು ತಾಂಡಾ ಶಾಲಾ ವತಿಯಿಂದ ಅರಸೀಕೆರೆ ಗ್ರಾಮದ ಜ್ಞಾನಜ್ಯೋತಿ ಕಾನ್ವೆಂಟ್ ಆವರಣದಲ್ಲಿ ವಲಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೌಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೆಟ್ಟಿ ನಾಯ್ಕ್ ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಪಾಠದ ಜೊತೆಗೆ ಯಾವುದೇ ಕ್ರೀಡಾಕೂಟಗಳು ಸಹ ನಡೆದಿರಲಿಲ್ಲ. ಈ ವರ್ಷದಿಂದ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಎಂದಿನAತೆ ಚುರುಕುಗೊಂಡಿವೆ.ನಮ್ಮ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಶೌಚಾಲಯ,ಶಾಲೆಯ ಅವರಣವನ್ನು.ಸುತ್ತ ಕಾಂಪೌAಡ್, ಆಟದ ಮೈದಾನ, ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದರುಜಿಲ್ಲಾ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ್ ಸಂಗಪ್ಪನವರು ಮಾತನಾಡಿ ಕ್ರೀಡೆ ಎಂಬುದು ಸಂಘಟನಾತ್ಮಕ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ದೈಹಿಕ ಚಟುವಟಿಕೆಯಾಗಿದೆ, ಗ್ರಾಮ ಪಂಚಾಯತಿ ಅವರ ಸಹಕಾರ, ಶಾಲಾ ಅಭಿವೃದ್ಧಿ ಸಮಿತಿ. ಪೋಷಕರು. ಶಿಕ್ಷಕರ ಸಹಕಾರವಿಲ್ಲದೆ ಇಂಥ ಕ್ರೀಡಾಕೂಟವನ್ನು ಕೇವಲ ಶಿಕ್ಷಣ ಇಲಾಖೆಯಿಂದ ನಡೆಸಲು ಅಸಾಧ್ಯವಾದ ಮಾತು. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು, ಹರಪನಹಳ್ಳಿ ತಾಲೂಕಿನ ಅರಸೀಕೆರೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ,ಮಕ್ಕಳು ಇಂಥ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಾಲ್ಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯ ಮಟ್ಟ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಹ ಪಾಲ್ಗೊಂಡು ದೇಶಕ್ಕೆ ಹೆಸರು ತರಬೇಕೆಂದು ಮಕ್ಕಳಿಗೆ ಶುಭ ಹಾರೈಸಿದರು.