ಅರಸಿಕೇರೆ ಎನ್.ಕೊಟ್ರೇಶ್ ಕಾಂಗ್ರೆಸ್ ಸೇರ್ಪಡೆ

ಹರಪನಹಳ್ಳಿ.ನ.೧೨ : ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಪರಾಜಿತಗೊಂಡಿದ್ದ ಜೆಡಿಎಸ್ ಮುಖಂಡ ಅರಸಿಕೇರೆ ಎನ್.ಕೊಟ್ರೇಶ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.ಡಿ.ಕೆ.ಶಿವಕುಮಾರ ಬೆಂಗಳೂರಿನ ನಿವಾಸದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ನAತರ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅರಸಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮತ್ತಹಳ್ಳಿ ಮ0ಜುನಾಥ, ಜಿಪಂ ಮಾಜಿ ಸದಸ್ಯ ತೆಲಿಗಿ ಈಶಪ್ಪ, ಐಗೋಳ ಚಿದಾನಂದ, ಯಶವಂತಗೌಡ, ನೀಲಗು0ದ ವಕೀಲ ವಾಗೀಶ ಇತರರು ಹಾಜರಿದ್ದರು.